ಕೋವಿಡ್‌ ಆಯ್ತು, ಇನ್ನು ಆಹಾರ ಕೊರತೆಯಿಂದ ಜನ ಸಾಯೋ ಬಾರಿನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆಹಾರದ ಕೊರತೆಯಿಂದಾಗಿ ಜಗತ್ತು “ವಿಪತ್ತು” ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಉಕ್ರೇನ್‌ನಲ್ಲಿನ ಯುದ್ಧ, ಹವಾಮಾನ ಬದಲಾವಣೆ, ಇತ್ಯಾದಿಗಳಿಂದ ಹಿಂದೆಂದೂ ಕಂಡಿರದ ಜಾಗತಿಕ ಹಸಿವಿನ ಬಿಕ್ಕಟ್ಟು ಸೃಷ್ಟಿಯಾಗಿದೆ. ಈಗಾಗಲೇ ನೂರು ಮಿಲಿಯನ್‌ ಜನರು ಅದರಿಂದ ಬಾಧಿತರಾಗಿದ್ದಾರೆ ಎಂದು ಯುಎನ್‌ ಸೆಕ್ರೆಟರಿ ಜನರಲ್‌ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

2022ರಲ್ಲಿಯೇ ಕ್ಷಾಮ ಘೋಷಿಸುವ ಅಪಾಯ ಎದುರಾಗಿದೆ. 2023ರ ಪರಿಸ್ಥಿತಿ ಇನ್ನು ಕೆಟ್ಟದಾಗಿರಲಿದೆ. ಹೆಚ್ಚುತ್ತಿರುವ ರಸಗೊಬ್ಬರ ಮತ್ತು ಇಂಧನ ಬೆಲೆಗಳನ್ನು ನಿಭಾಯಿಸಲು ಪ್ರಪಂಚದಾದ್ಯಂತದ ರೈತರು ಹೆಣಗಾಡುತ್ತಿರುವಾಗ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದಾದ್ಯಂತ ಬೆಳೆ ಕಟಾವಿನಲ್ಲಿ ವ್ಯತ್ಯಾಸವಾಗುತ್ತಿದೆ. ಈ ವರ್ಷದ ಆಹಾರ ಸಮಸ್ಯೆಯು ಮುಂದಿನ ವರ್ಷದ ಆಹಾರ ಕೊರತೆಗೆ ಕಾರಣಾವಾಗುತ್ತಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಯಾವುದೇ ದೇಶವು ಸಮರ್ಥವಾಗಿಲ್ಲ, ಎಂದು ಗುಟೇರಸ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಯುಎನ್ ಸಮಾಲೋಚಕರು ಕಪ್ಪು ಸಮುದ್ರದ ಮೂಲಕ ಆಹಾರವನ್ನು ರಫ್ತು ಮಾಡಲು ಉಕ್ರೇನ್‌ಗೆ ಅನುವು ಮಾಡಿಕೊಡುವ ಒಪ್ಪಂದದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ನಿರ್ಬಂಧಗಳಿಲ್ಲದೆ ವಿಶ್ವ ಮಾರುಕಟ್ಟೆಗಳಿಗೆ ಆಹಾರ ಮತ್ತು ರಸಗೊಬ್ಬರವನ್ನು ತರಲು ರಷ್ಯಾಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಈ ಕುರಿತು ಯುಎನ್‌ ಪ್ರಯತ್ನಗಳು ನಡೆಯುತ್ತಿವೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!