ವಿಶ್ವ ಪುರುಷರ ದಿನ: ಸ್ತ್ರೀ ಮತ್ತು ಪುರುಷರ ಮಧ್ಯೆ ಇರುವ ಈ ವ್ಯತ್ಯಾಸದ ಬಗ್ಗೆ ತಿಳಿಯಲೇಬೇಕು..

ಇಂದು ವಿಶ್ವ ಪುರುಷರ ದಿನ. ಮಹಿಳಾ ದಿನಕ್ಕೆ ಇರುವಷ್ಟು ಪ್ರಾಮುಖ್ಯತೆ ಪುರುಷರ ದಿನಕ್ಕೆ ನೀಡುವುದಿಲ್ಲ. ಪುರುಷರ ಜೀವನ, ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಜ್ಜ, ತಂದೆ, ಗಂಡ, ಸ್ನೇಹಿತ, ಮಗ, ಸಹೋದರನಾಗಿ ಪ್ರೀತಿ ತುಂಬುವ ಎಲ್ಲ ಗಂಡಸರಿಗೂ ಧನ್ಯವಾದ ತಿಳಿಸೋಣ..

ಪುರುಷ ಹಾಗೂ ಮಹಿಳೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಆದರೆ ನಾವು ಇಲ್ಲಿ ತಿಳಿಸುವ ವ್ಯತ್ಯಾಸಗಳ ಬಗ್ಗೆ ನಿಮಗೆ ಗೊತ್ತಿದೆಯಾ?

  1. ಪುರುಷರ ಚರ್ಮ ಹೆಣ್ಣುಮಕ್ಕಳ ಚರ್ಮಕ್ಕಿಂತ ಶೇ.25ರಷ್ಟು ದಪ್ಪವಾಗಿದೆಯಂತೆ.
  2. ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ಕಬ್ಬಿಣಾಂಶ ಇರುತ್ತದೆ. ಪಿರಿಯಡ್ಸ್ ಕಾರಣದಿಂದ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆ ಇರುತ್ತದೆ.
  3. ಸಾಮಾನ್ಯವಾಗಿ ಮಹಿಳೆಯರಿಗೆ ತೋರುಬೆರಳು ಎಲ್ಲ ಬೆರಳಿಗಿಂತ ಉದ್ದವಾಗಿರುತ್ತದೆ. ಆದರೆ ಪುರುಷರಿಗೆ ಮಧ್ಯದ ಬೆರೆಳು ಉದ್ದವಾಗಿರುತ್ತದೆ.
  4. ಮಹಿಳೆ ಹಾಗೂ ಪುರುಷ ಇಬ್ಬರ ಮೆದುಳಿದ ವಿನ್ಯಾಸ ಬೇರೆ ಬೇರೆ ರೀತಿ ಇದೆ. ಹಾಗಾಗಿಯೇ ಒಂದೇ ವಿಷಯಕ್ಕೆ ಅವರಿಬ್ಬರು ಬೇರೆ ಬೇರೆ ರೀತಿ ಸ್ಪಂದಿಸುತ್ತಾರೆ.
  5. ವ್ಯಾಯಾಮ ಮಾಡುವಾಗ ಮಹಿಳೆಯರಿಗೆ ವ್ಯಾಯಾಮ ಮಾಡಲು ಎನರ್ಜಿ ನೀಡುವುದು ಫ್ಯಾಟ್, ಆದರೆ ಪುರುಷರ ಎನರ್ಜಿ ನೀಡುವುದು ಕಾರ್ಬೋಹೈಡ್ರೇಟ್ಸ್ಮ
  6. ಹಿಳೆಯರು ದಪ್ಪ ಆದಾಗ ಅವರ ಫ್ಯಾಟ್ ನಿಲ್ಲುವುದು ಬ್ಯಾಕ್ ಹಾಗೂ ತೊಡೆಗಳಲ್ಲಿ. ಪುರುಷರ ಫ್ಯಾಟ್ ನಿಲ್ಲೋದು ಹೊಟ್ಟೆಯ ಸುತ್ತಾಮುತ್ತ.
  7. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅನಾರೋಗ್ಯ ಕಾಡುತ್ತದೆ. ವೈದ್ಯರ ಬಳಿ ಹೋದಾಗಲೂ ತನಗೇನಾಗುತ್ತಿದೆ ಎನ್ನುವ ಸಂಪೂರ್ಣ ಸತ್ಯವನ್ನು ಪುರುಷರು ಹೇಳಿಕೊಳ್ಳೋದಿಲ್ಲ.
  8. ಮಹಿಳೆಯರಿಗೆ ಬೇಗ ಚಳಿಯಾಗುತ್ತದೆ, ಪುರುಷರಿಗೆ ಥಂಡಿ ಬೇಗ ತಾಗುವುದಿಲ್ಲ.
  9. ಮಹಿಳೆಯರು ರುಚಿ ಹಾಗೂ ವಾಸನೆಯನ್ನು ಬೇಗ ಕಂಡುಹಿಡಿಯುತ್ತಾರೆ. ಪುರುಷರಿಗಿಂತ ಹೆಚ್ಚು ಟೇಸ್ಟ್‌ಬಡ್ಸ್ ಮಹಿಳೆಯರಲ್ಲಿದೆ.
  10. ಮಹಿಳೆಯರಿಗಿಂತ ಪುರುಷರು ತುಂಬಾ ಪ್ರಾಕ್ಟಿಕಲ್, ಲೆಕ್ಕಾಚಾರದಲ್ಲಿ ಅವರೇ ಫಸ್ಟ್.
  11. ಭಾವನೆಗಳನ್ನು ಮನಸ್ಸಿಗೆ ತೆಗೆದುಕೊಂಡ ಪುರುಷರು ಅದರಿಂದ ಹೊರಬರೋಕೆ ಹೆಚ್ಚು ಕಷ್ಟಪಡುತ್ತಾರೆ. ಮಹಿಳೆಯರಿಗೆ ಇದು ಸ್ವಲ್ಪ ಸುಲಭ.
  12. ಮಹಿಳೆಯರ ಮೆದುಳಿನ ಬಲಭಾಗ ಪುರುಷರ ಮೆದುಳಿಗಿಂತ ಬೇಗ ಕೆಲಸ ಮಾಡುತ್ತದೆ. ಹಾಗಾಗಿ ಮಹಿಳೆಯರ ಮಾತು ಹೆಚ್ಚು, ಓದು ಬರಹದಲ್ಲಿ ಅವರು ಮುಂದು.
  13. ಪುರುಷರ ಎಡಭಾಗದ ಮೆದುಳು ಮಹಿಳೆಯರ ಮೆದುಳಿಗಿಂತ ಬೇಗ ಕೆಲಸ ಮಾಡುತ್ತದೆ. ಹಾಗಾಗಿ ಅವರಿಗೆ ಲಾಜಿಕ್ ಇರುವ ಕೆಲಸಗಳು, ಲೆಕ್ಕಾಚಾರ, ಸಮಸ್ಯೆ ಬಿಡಿಸುವುದು, ಪಝಲ್ ಬಿಡಿಸುವುದು ಸುಲಭ.
  14. ಮಹಿಳೆಯರಿಗೆ ಮುಖ ಇರುವ ಗೊಂಬೆಗಳು ಇಷ್ಟ. ಪುರುಷರಿಗೆ ಮುರಿದು ಹಾಕುವ ಅಥವಾ ತಿರುಗುವ ಯಾವ ವಸ್ತುವಾದರೂ ಇಷ್ಟ.
  15. ಮಹಿಳೆಯರಿಗೆ ಸಹಾಯ ಕೇಳುವುದು ಅಥವಾ ಸಹಾಯ ಮಾಡುವುದು ದೊಡ್ಡ ವಿಷಯವಲ್ಲ, ಇದು ಅವರ ಶಕ್ತಿ ಪ್ರದರ್ಶಿಸುತ್ತದೆ. ಆದರೆ ಪುರುಷರಿಗೆ ಸಹಾಯ ಪಡೆಯಲು ಇಷ್ಟವಿಲ್ಲವಂತೆ, ಇದು ಅವರನ್ನು ದುರ್ಬಲ ಎಂದು ತೋರಿಸುತ್ತದೆ ಎನ್ನುವುದು ಅವರ ನಂಬಿಕೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!