ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಂಟು ಜನರಲ್ಲಿ ಒಬ್ಬರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿದ್ದಾರೆ. ಇವು ಹೆಚ್ಚಿನದಾಗಿ ಅಪ್ರಾಪ್ತ ವಯಸ್ಕರು ಮತ್ತು ಯುವಕರಲ್ಲಿ ಕಂಡುಬರುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವುದರ ಹಿಂದೆ ಕಾರಣಗಳಿವೆ.
ದೈಹಿಕ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತದೋ ಹಾಗೆಯೇ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಮನಸ್ಸಿಗೆ ಸಂತೋಷ ನೀಡುವ ವಿಷಯಗಳತ್ತ ಗಮನ ಹರಿಸಬೇಕು. ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ (WFMH) ಇಂತಹ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸಲು 1990 ರಿಂದ ಅಧಿಕೃತವಾಗಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನು ಆಯೋಜಿಸುತ್ತಿದೆ.
- ಮಾನಸಿಕವಾಗಿ ಆರೋಗ್ಯವಾಗಿರಲು ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ನಿತ್ಯ ವ್ಯಾಯಾಮ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ.
- ಹಸಿರು ನಿಸರ್ಗದಲ್ಲಿ ಸ್ವಲ್ಪ ಹೊತ್ತು ನಡೆಯುವುದು, ನೆಚ್ಚಿನ ಹಾಡುಗಳನ್ನು ಕೇಳುವುದು ಮತ್ತು ನೃತ್ಯ ಮಾಡುವುದರಿಂದ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು.
- ಇಷ್ಟವಾದ ಆಹಾರವನ್ನು ಸೇವಿಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪೌಷ್ಟಿಕ ಆಹಾರ ತೆಗೆದುಕೊಳ್ಳಿ. ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು.
- ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆ ಅತ್ಯಗತ್ಯ. ಪ್ರತಿದಿನ ಮಲಗಲು ಟೈಮ್ ಟೇಬಲ್ ಅನ್ನು ಅನುಸರಿಸಬೇಕು.
- ಉಸಿರಾಟದ ವ್ಯಾಯಾಮವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
- ಸಾಮಾಜಿಕ ಮಾಧ್ಯ, ಸೆಲ್‌ಪೋನ್, ಕಂಪ್ಯೂಟರ್‌ಗಳಿಂದ ದೂರವಿರುವುದು ಉತ್ತಮ
- ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
- ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರ ಸಲಹೆ ಪಡೆಯಲು ಹಿಂಜರಿಯಬೇಡಿ. ಕೌನ್ಸೆಲಿಂಗ್ ಉತ್ತಮ ಫಲಿತಾಂಶಗಳನ್ನು ನೀಡಬಹುದು.
- ಒತ್ತಡವನ್ನು ಕಡಿಮೆ ಮಾಡುವುದು ಧನಾತ್ಮಕ ಚಿಂತನೆ, ತಾಳ್ಮೆಯಿಂದ ಇರುವುದು ಉತ್ತಮ.