Wednesday, February 28, 2024

SHOCKING | ವಿಶ್ವದಾಖಲೆ ವೀರ, ‘ರೈಸಿಂಗ್ ಸ್ಟಾರ್’ ಕೆಲ್ವಿನ್ ಕಿಪ್ಟುಮ್ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದ ಕೆಲ್ವಿನ್ ಕಿಪ್ಟುಮ್ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

ಕೀನ್ಯಾದಲ್ಲಿ ನಡೆದ ಅಪಘಾತದಲ್ಲಿ ಕೆಲ್ವಿನ್, ಕೋಚ್ ಗೆರ್ವೈಸ್ ಹಕಿಜಿಮಾನ ಮೃತಪಟ್ಟಿದ್ದಾರೆ. ಕೇವಲ ೨೪ ವರ್ಷಕ್ಕೇ ವಿಶ್ವ ದಾಖಲೆ ಮಾಡಿದ್ದ ಕೆಲ್ವಿನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗಿದೆ.

ಶಿಕಾಗೋ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೀನ್ಯಾದ ಎಲಿಯುಡ್ ಕಿಪ್‌ಜೋಕ್ ಅವರ ದಾಖಲೆಯನ್ನು ಮುರಿದು ವಿಶ್ವದಾಖಲೆ ಸೃಷ್ಟಿಸಿದ ಕೀರ್ತಿಗೆ ಕೆಲ್ವಿನ್ ಪಾತ್ರರಾಗಿದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆಯುವ ತವಕ ಹೊಂದಿದ್ದ ಕೆಲ್ವಿನ್ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಅಭ್ಯಾಸ್ ಮುಗಿಸಿ ಮನೆಗೆ ಬರುವ ವೇಳೆ ಎರಡು ಕಾರ್‌ಗಳ ನಡುವೆ ಡಿಕ್ಕಿಯಾಗಿದೆ.

ಕೆಲ್ವಿನ್ ಕಾರ್ ಡ್ರೈವಿಂಗ್ ಮಾಡುತ್ತಿದ್ದು, ಅತಿ ವೇಗದಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!