ಇಂದು ವಿಶ್ವ ದೂರದರ್ಶನ ದಿನ: ಈ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳಿವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನಾಗಿ ಆಚರಿಸಲಾಗುತ್ತದೆ. ದೂರದರ್ಶನ ಸಮಾಜಕ್ಕೆ ಮತ್ತು ವ್ಯಕ್ತಿಯ ಜೀವನಕ್ಕೆ ಎಷ್ಟು ಮುಖ್ಯ ಎಂಬುದರ ಜೊತೆಗೆ ಸಮಾಜ ಮತ್ತು ವ್ಯಕ್ತಿಗಳ ಜೀವನ ಎರಡರಲ್ಲೂ ದೂರದರ್ಶನ ವಹಿಸುವ ಮಹತ್ವದ ಪಾತ್ರದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ನಮಗೆ ಮಾಹಿತಿ ಮತ್ತು ಮನರಂಜನೆಯ ಮೂಲವಾಗಿದ್ದು, ಈ ವಿದ್ಯುನ್ಮಾನ ಮಾಧ್ಯಮಕ್ಕೆ ಇಂದು ಧನ್ಯವಾದ ತಿಳಿಸುವ ದಿನ ಎಂದರೆ ತಪ್ಪಾಗಲಾರದು.

ಮೊದಲ ವಿದ್ಯುತ್ ದೂರದರ್ಶನವನ್ನು ಅಮೆರಿಕನ್ ಸಂಶೋಧಕ ಫಿಲೋ ಟೇಲರ್ ಫಾರ್ನ್ಸ್‌ವರ್ತ್ ಅವರು 1927 ರಲ್ಲಿ ರಚಿಸಿದರು. ಚಾರ್ಲ್ಸ್ ಫ್ರಾನ್ಸಿಸ್ ಜೆಂಕಿನ್ಸ್ ಅವರ ಮೊದಲ ಮೆಕ್ಯಾನಿಕಲ್ ಟೆಲಿವಿಷನ್ ಸ್ಟೇಷನ್ W3XK ಯು ಮೊದಲ ಪ್ರಸಾರವನ್ನು ಒಂದು ವರ್ಷದ ಬಳಿಕ ಮಾಡಲಾಯಿತು. ವಿಶ್ವ ದೂರದರ್ಶನ ದಿನವನ್ನು ನವೆಂಬರ್ 21 ರಂದು ಆಚರಿಸಬೇಕೆಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಡಿಸೆಂಬರ್ 17, 1996 ರಂದು ಅಂಗೀಕಾರ ಮಾಡಲಾಯಿತು.

ಮನೆಯಲ್ಲಿಯೇ ಕುಳಿತು ಆರಾಮವಾಗಿ ದೂರದರ್ಶನದ ಮೂಲಕ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಾವು ನೋಡಬಹುದು.
ಮೊದಲ ವಿಶ್ವ ಟೆಲಿವಿಷನ್ ಫೋರಮ್ ಅನ್ನು ವಿಶ್ವಸಂಸ್ಥೆಯು ನವೆಂಬರ್ 21 ಮತ್ತು 22, 1996 ರಂದು ಆಯೋಜಿಸಿತು. ನಮ್ಮ ಬದಲಾಗುತ್ತಿರುವ ಪರಿಸರದಲ್ಲಿ ದೂರದರ್ಶನವು ಎಷ್ಟು ಮಹತ್ವದ್ದಾಗಿದೆ ಎಂಬುದರ ಕುರಿತು ಮಾತನಾಡಲು ಪ್ರಮುಖ ಮಾಧ್ಯಮ ವ್ಯಕ್ತಿಗಳು ಸೇರಿದ್ದರು.

ವಿಶ್ವ ದೂರದರ್ಶನ ದಿನದ ಮಹತ್ವ:

ದೂರದರ್ಶನದ ಸೃಷ್ಟಿ ಮತ್ತು ಆಧುನಿಕ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ಪಡೆದಿದ್ದರಿಂದ ವಿಶ್ವ ದೂರದರ್ಶನ ದಿನದಂದು ಆಚರಿಸಲಾಗುತ್ತದೆ. ದೂರದರ್ಶನ ನಮ್ಮ ಜೀವನದ ಅತ್ಯಗತ್ಯ ಭಾಗವಾಗುತ್ತಿವೆ, ನೈಜ ಸಮಯದಲ್ಲಿ ನಮಗೆ ಮನರಂಜನೆ ಮತ್ತು ಬ್ರೇಕಿಂಗ್ ಸುದ್ದಿಗಳ ಮೂಲವನ್ನು ಒದಗಿಸುತ್ತವೆ. OTT ಸೇವೆಗಳ ಬಳಕೆಯಲ್ಲಿ ಹೆಚ್ಚಳದ ಹೊರತಾಗಿಯೂ, ದೂರದರ್ಶನಗಳು ನಮ್ಮ ಹೃದಯದಲ್ಲಿ ಇನ್ನೂ ವಿಶೇಷ ಸ್ಥಾನವನ್ನು ಹೊಂದಿವೆ. ಅನೇಕ ಜನರು ತಮ್ಮ ದಿನನಿತ್ಯದ ಕೆಲಸಗಳನ್ನು ಟಿವಿ ನೋಡುವ ಮೂಲಕವೂ ಮಾಡುತ್ತಾರೆ. ಅದರಲ್ಲೂ ಮನೆಗಳಲ್ಲಿ ಹೆಂಗಳೆಯರ ಟಿವಿ ಸೀರಿಯಲ್ಸ್‌ ಮನೆ ಮಾತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!