Saturday, December 9, 2023

Latest Posts

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌: 469 ರನ್‌ಗೆ ಆಸ್ಟ್ರೇಲಿಯಾ ಆಲೌಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಮೊದಲ ಇನ್ನಿಂಗ್ಸ್‌ಗಲ್ಲಿ 121.3 ಓವರ್‌ಗಳ ಆಟದಲ್ಲಿ ಆಸ್ಟ್ರೇಲಿಯಾ 469 ರನ್‌ಗೆ ಆಲೌಟ್‌ ಆಗಿದೆ.

3 ವಿಕೆಟ್‌ಗೆ 327 ರನ್‌ಗಳಿಂದ 2ನೇ ದಿನವಾದ ಗುರುವಾರದ ಆಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಈ ಮೊತ್ತಕ್ಕೆ 142 ರನ್‌ ಪೇರಿಸಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲ ದಿನದ ಆಟದ ಅಂತ್ಯಕ್ಕೆ ಶತಕದಿಂದ ಐದು ರನ್‌ಗಳ ದೂರದಲ್ಲಿದ್ದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ 268 ಎಸೆತಗಳಲ್ಲಿ 121 ರನ್‌ ಬಾರಿಸುವುದರೊಂದಿಗೆ ಗಮನಸೆಳೆದರು. ಇವರಿಗೆ ಉತ್ತಮ ಸಾಥ್‌ ನೀಡಿದ ಟ್ರಾವಿಸ್‌ ಹೆಡ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದರು. 174 ಎಸೆತ ಎದುರಿಸಿದ ಹೆಡ್‌ 25 ಬೌಂಡರಿ, 1 ಸಿಕ್ಸರ್‌ಗಳೊಂದಿಗೆ 163 ರನ್‌ ಬಾರಿಸಿದರು.
ಸ್ಟೀವನ್‌ ಸ್ಮಿತ್‌ಗೆ ಎತತ ಎರಡು ಹಾಫ್‌ ವಾಲಿ ಎಸೆತಗಳನ್ನು ಎಸೆದ ಸಿರಾಜ್‌ ಬೌಂಡರಿ ಚಚ್ಚಿಸಿಕೊಂಡರು. ಅದರೊಂದಿಗೆ ಸ್ಮಿತ್‌ ತಮ್ಮ 31ನೇ ಶತಕವವನ್ನು ಪೂರೈಸಿದರು. ಅವರಿಗೆ ಸಾಥ್‌ ನೀಡಿದ ಟ್ರಾವಿಸ್‌ ಹೆಡ್‌ ನಿರಾಯಾಸವಾಗಿ 150ರ ಗಡಿ ದಾಟಿದರು.

2ನೇ ದಿನದ ಭೋಜನ ವಿರಾಮದ ಸಮಯದಲ್ಲಿ ಭಾರತ ಮೊದಲ ವಿಕೆಟ್‌ ಸಂಪಾದನೆ ಮಾಡಿತು. 163 ರನ್‌ ಬಾರಿಸಿದ್ದ ಟ್ರಾವಿಸ್‌ ಹೆಡ್‌ ವಿಕೆಟ್‌ಅನ್ನು ಮೊಹಮದ್‌ ಸಿರಾಜ್‌ ಉರುಳಿಸಿದರು. ಆ ಬಳಿಕ ಆಸೀಸ್‌ನ ವಿಕೆಟ್‌ ಪತನ ಆರಂಭವಾಯಿತು. ದಿನದ ಐದನೇ ಓವರ್‌ನಲ್ಲಿ ಮೊಹಮದ್‌ ಶಮಿ ಕ್ಯಾಮರೂನ್‌ ಗ್ರೀನ್‌ನ ವಿಕೆಟ್‌ ಉರುಳಿಸಿದರು. 2ನೇ ಸ್ಲಿಪ್‌ನಲ್ಲಿದ್ದ ಶುಭ್‌ಮನ್‌ ಗಿಲ್‌ ಇವರ ವಿಕೆಟ್‌ಅನ್ನು ಉರುಳಿಸಿದರು. ಇದರ ಬೆನ್ನಲ್ಲಿಯೇ ಸ್ಟೀವನ್‌ ಸ್ಮಿತ್‌ ಕೂಡ ಔಟಾದಾಗ ಆಸೀಸ್‌ 387 ರನ್‌ ಬಾರಿಸಿತ್ತು. 400 ರನ್‌ ಒಳಗಾಗಿ ಆಸೀಸ್‌ಅನ್ನು ಕಟ್ಟುಹಾಕುವ ಗುರಿಯಲ್ಲಿದ್ದ ಭಾರತಕ್ಕೆ ಅಲೆಕ್ಸ್‌ ಕ್ಯಾರಿ (48ರನ್‌, 69 ಎಸೆತ, 7 ಬೌಂಡರಿ, 1 ಸಿಕ್ಸರ್‌) ಕಗ್ಗಂಟಾಗಿ ಕಾಡಿದರು. ಬಾಲಂಗೋಚಿಗಳೊಂದಿಗೆ ಅದರಲ್ಲೂ ಪ್ರಮುಖವಾಗಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಜೊತೆ 8ನೇ ವಿಕೆಟ್‌ಗೆ 66 ಎಸೆತಗಳಲ್ಲಿ 51 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 450ರ ಗಡಿಗೆ ತಂದು ನಿಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!