ವಿಶ್ವ ಕುಸ್ತಿ ಚಾಂಪಿಯನ್​ಶಿಪ್​​: ಚಿನ್ನ ಗೆದ್ದು ಹೊಸ ದಾಖಲೆ ಬರೆದ ಅಂತಿಮ್​​ ಪಂಗಾಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಂಡರ್​​-20 ವಿಶ್ವ ಕುಸ್ತಿ ಚಾಂಪಿಯನ್​​ಶಿಪ್​​​ನಲ್ಲಿ ಭಾರತದ ಕುಸ್ತಿಪಟು ಅಂತಿಮ್​ ಪಂಗಾಲ್​​ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಸ್ವರ್ಣ ಪದಕ ಗೆದ್ದಿರುವ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್​​​ ಕುಸ್ತಿ ಚಾಂಪಿಯನ್​​ಶಿಪ್​​ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್​ ಈ ಐತಿಹಾಸಿಕ ಸಾಧನೆ ಮಾಡಿದ್ದು, ಕೇವಲ 17 ವರ್ಷದ ಅಂತಿಮ್​ ಪಂಗಾಲ್​ ವಿಶ್ವಕುಸ್ತಿ ಚಾಂಪಿಯನ್​ಶಿಪ್​​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.
ಫೈನಲ್​ ಪಂದ್ಯದಲ್ಲಿ ಕಜಕಿಸ್ತಾನದ ಅಲ್ಟನ್​​ ಶಗಾಯೆವಾ ವಿರುದ್ಧ ನಡೆದ ಸೆಣಸಾಟದಲ್ಲಿ 8-0 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ 34 ವರ್ಷಗಳಿಂದ ನಡೆಯುತ್ತಿರುವ ಈ ಚಾಂಪಿಯನ್​ಶಿಪ್​​ನಲ್ಲಿ ಭಾರತ ಚಿನ್ನ ಗೆದ್ದಿರಲಿಲ್ಲ. ಈ ಹಿಂದೆ 2021ರ ಕೆಡೆಟ್​​ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಕಂಚು ಗೆದ್ದಿದ್ದ ಅಂತಿಮ್​ ಪಂಗಾಲ್​, 2022ರ ಅಂಡರ್​-23 ಏಷ್ಯನ್​ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಗೆದ್ದಿದ್ದರು.
ಮೂಲತಃ ಹರಿಯಾದ ಹಿಸಾರ್​​ನವರಾಗಿರುವ ಅಂತಿಮ್​, 2004ರಲ್ಲಿ ಜನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!