ರಷ್ಯಾ ದಾಳಿಗೆ ನಾಶವಾಯ್ತು ವಿಶ್ವದ ಅತಿ ದೊಡ್ಡ ವಿಮಾನ: ರಿಪೇರಿ ವೆಚ್ಚ ಬರೋಬ್ಬರಿ 3 ಶತಕೋಟಿ ಡಾಲರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ನಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಈ ನಡುವೆ ವಿಶ್ವದ ಅತಿದೊಡ್ಡ ವಿಮಾನವನ್ನು ರಷ್ಯಾ ಪಡೆ ಧ್ವಂಸ ಮಾಡಿದೆ.
ಇದು ಉಕ್ರೇನ್‌ ನ ಆಂಟೋನೋವ್‌ 225 ಸರಕು ವಿಮಾನವಾಗಿದ್ದು, ಇದನ್ನು ಉಕ್ರೇನ್‌ ನ ಕೀವ್‌ ನ ಹೊರವಲಯದಲ್ಲಿ ನಾಶ ಮಾಡಿಲಾಗಿದೆ ಎಂದು ಉಕ್ರೇನ್‌ ತಿಳಿಸಿದೆ.

Antonov an-225 Mriya: World's Largest Cargo Plane, History, Detailsಈ ವಿಮಾನಕ್ಕೆ ʼಮ್ರೀಯಾʼ ಎಂದು ಹೆಸರಿಸಲಾಗಿತ್ತು. ಅಂದರೆ ಉಕ್ರೇನ್‌ ಭಾಷೆಯಲ್ಲಿ ಕನಸು ಎಂದರ್ಥ ಬರಲಿದೆ. ಇದು ಉಕ್ರೇನ್‌ ವಾಯುಯಾನದ ಹೆಗ್ಗುರುತಾಗಿತ್ತು. ಇದು 84 ಮೀಟರ್‌ ಉದ್ದ (276 ಅಡಿ), ಗಂಟೆಗೆ 850 ಕಿ. ವೇಗದಲ್ಲಿ 250 ಟನ್‌ ಸರಕು ಸಾಗಿಸಬಲ್ಲ ಅತ್ಯಂತ ಬಲಿಷ್ಠವಾಗಿದೆ.
ರಷ್ಯಾದ ದಾಳಿಯಲ್ಲಿ ನಾಶವಾಗಿರುವ ʼಮ್ರಿಯಾʼ ವಿಮಾನವನ್ನು ರಿಪೇರಿ ಮಾಡಲು 3 ಶತಕೋಟಿ ಡಾಲರ್‌ ವೆಚ್ಚವಾಗಲಿದ್ದು, ಬರೋಬ್ಬರಿ 5 ವರ್ಷ ಸಮಯ ಬೇಕಾಗುತ್ತದೆ ಎಂದು ತಿಳಿಸಿದೆ.
ಈ ವಿಮಾನವನ್ನು 1988ರ ಸೋವಿಯತ್‌ ಏರೋನಾಟಿಕಲ್‌ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಹಾರಾಟ ಕೈಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!