SPECIAL| ಭೂಗರ್ಭದಲ್ಲೊಂದು ಹೋಟೆಲ್..ಅಲ್ಲಿಗೆ ಹೋಗಬೇಕಾದರೆ ಸಾಹಸ ಮಾಡಲೇಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾವು ಆಕಾಶ, ಭೂಮಿ ಮೇಲೆ, ಸಮುದ್ರದಲ್ಲಿ ಹೋಟೆಲ್ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಭೂಗರ್ಭದೊಳಗಿನ ಹೋಟೆಲ್ ಬಗ್ಗೆ ಕೇಳಿದ್ದೀರಾ? ಅಂಡರ್ ಗ್ರೌಂಡ್‌ನಲ್ಲಿ ಹೋಟೆಲ್ ಇದೆ. ಜೊತೆಗೆ ಈ ಹೋಟೆಲ್ ಗೆ ಹೋಗಬೇಕೆಂದರೂ ಸಾಹಸ ಮಾಡಲೇ ಬೇಕು..

ಈ ಭೂಗತ ಹೋಟೆಲ್ 1,375 ಅಡಿಗಳಿಗಿಂತ ಹೆಚ್ಚು ಆಳದಲ್ಲಿದೆ. ಅದಕ್ಕಾಗಿಯೇ ಈ ಹೋಟೆಲ್ ವಿಶ್ವದ ಆಳವಾದ ಹೋಟೆಲ್ ಎಂದು ಗುರುತಿಸಲ್ಪಟ್ಟಿದೆ. ಅದರ ಹೆಸರು ‘ದಿ ಡೀಪ್ ಸ್ಲೀಪ್ ಹೋಟೆಲ್’. ಈ ಹೋಟೆಲ್‌ಗೆ ಹೋಗುವುದು ಅಷ್ಟು ಸುಲಭವಲ್ಲ. ಗಣಿ ಮತ್ತು ಬಂಡೆಗಳ ಉದ್ದಕ್ಕೂ ಟ್ರೆಕ್ಕಿಂಗ್. ಪ್ರಾಚೀನ ಸೇತುವೆಗಳನ್ನು ದಾಟಬೇಕು. ಮೆಟ್ಟಿಲುಗಳನ್ನು ದಾಟಿ..ಅತ್ಯಂತ ಕಷ್ಟದ ಹಾದಿಯಲ್ಲಿ ಸಾಗಿ ಹೊಟೇಲ್ ತಲುಪಬೇಕು.

Getting to the Deep Sleep hotel certainly isn't easy

ಹಾಗಾದರೆ, ಈ ಭೂಗತ ಹೋಟೆಲ್ ಎಲ್ಲಿದೆ? ಅಂದ್ರೆ, ಬ್ರಿಟನ್‌ನ ನಾರ್ತ್ ವೇಲ್ಸ್‌ನಲ್ಲಿರುವ ಎರಾರಿ ನ್ಯಾಷನಲ್ ಪಾರ್ಕ್‌ನಲ್ಲಿ ಸ್ನೋಡೋನಿಯಾ ಪರ್ವತಗಳ ಅಡಿಯಲ್ಲಿ 400 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ಈ ಹೋಟೆಲ್ ಅನ್ನು ನಿರ್ಮಿಸಲಾಗಿದೆ. ಎರಾರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಗಳ ಕೆಳಗೆ 1,375 ಅಡಿಗಳಷ್ಟು ಆಳವಾದ ಹೋಟೆಲ್‌ನಲ್ಲಿನ ಕೋಣೆಗಳು ಮತ್ತು ಕ್ಯಾಬಿನ್‌ಗಳು ದೀಪಗಳ ಬೆಳಕಿನಲ್ಲಿ ಬೆಳಗುತ್ತವೆ. ಇಷ್ಟು ಪ್ರಯಾಸಪಟ್ಟು ಅಲ್ಲಿಗೆ ತಲುಪಿದ ಬಳಿಕ ಅಲ್ಲಿನ ಸೆಟಪ್ ನೋಡಿದಾಗ ಆಯಾಸವೆಲ್ಲ ಮರೆತು ಹೋಗುತ್ತದೆ.

A look at The Deep Sleep hotel in Snowdonia, Wales

ಡೀಪ್ ಸ್ಲೀಪ್ ಹೋಟೆಲ್ ಎರಡು ಬೆಡ್‌ಗಳೊಂದಿಗೆ ನಾಲ್ಕು ಖಾಸಗಿ ಕ್ಯಾಬಿನ್‌ಗಳನ್ನು ಹೊಂದಿದೆ ಮತ್ತು ಡಬಲ್ ಬೆಡ್‌ನೊಂದಿಗೆ ಪ್ರತ್ಯೇಕ ಗುಹೆಯನ್ನು ಹೊಂದಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೆ ಬಾಡಿಗೆಗೆ ಪಡೆಯಬಹುದು. ಇದು ವಾರಕ್ಕೊಮ್ಮೆ ಮಾತ್ರ ತೆರೆದಿರುತ್ತದೆ. ಖಾಸಗಿ ಕ್ಯಾಬಿನ್‌ನಲ್ಲಿ ಇಬ್ಬರು ತಂಗಲು 350 ಪೌಂಡ್ (ರೂ. 36 ಸಾವಿರ), ಗುಹೆ ಕೋಣೆಗೆ 550 ಪೌಂಡ್ (ರೂ. 56 ಸಾವಿರ). ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳು ಸಹ ಲಭ್ಯವಿದೆ.

14 ವರ್ಷ ಮೇಲ್ಪಟ್ಟ ಮಕ್ಕಳನ್ನು ಈ ಹೋಟೆಲ್‌ನಲ್ಲಿ ವಯಸ್ಕರೊಂದಿಗೆ ಮಾತ್ರ ಅನುಮತಿಸಲಾಗಿದೆ. ಈ ಹೋಟೆಲ್‌ನಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಆಗಿದೆ. ಕ್ಯಾಬಿನ್‌ಗಳಲ್ಲಿ ನೀವು ಆರಾಮವಾಗಿ ಮಲಗಬಹುದು. ಇಷ್ಟು ಆಳದ ಹೊಟೇಲ್ ಗೆ ಹೋದರೆ ಅಲ್ಲಿಯೇ ಉಳಿದುಕೊಂಡು ಅಲ್ಲಿಯೇ ಊಟ ಮಾಡಿದ ಅನುಭವವಾಗುತ್ತದೆ ಎನ್ನುತ್ತಾರೆ ಸಂಘಟಕರು.

ಈ ಹೋಟೆಲ್‌ನಲ್ಲಿ ಉಳಿಯಲು ಬಯಸುವವರು ಮೊದಲು ಟ್ರಿಪ್ ಲೀಡರ್‌ನೊಂದಿಗೆ ವಿಕ್ಟೋರಿಯನ್ ಕಲ್ಲಿನ ಕ್ವಾರಿಗಳ ಮೂಲಕ ಚಾರಣ ಮಾಡಬೇಕು. ಮೆಟ್ಟಿಲು ಬಾವಿ, ಹಳೆ ಸೇತುವೆಗಳನ್ನು ದಾಟಿ.. ಒರಟು ರಸ್ತೆಗಳಲ್ಲಿ ಗಂಟೆಗಟ್ಟಲೆ ಸಂಚರಿಸಬೇಕು. ಹಾಗೆ ಪ್ರಯಾಣಿಸಿದ ನಂತರ ದೊಡ್ಡ ಕಬ್ಬಿಣದ ಬಾಗಿಲು ಒಳಬರುತ್ತದೆ. ಪ್ರಯಾಣದಲ್ಲಿರುವ ಅತಿಥಿಗಳಿಗೆ ಹೆಲ್ಮೆಟ್, ಲೈಟ್, ಶೂ ಇತ್ಯಾದಿಗಳನ್ನು ನೀಡಲಾಗುತ್ತದೆ. ಈ ಹೋಟೆಲ್‌ನಲ್ಲಿ ಉಳಿದುಕೊಂಡವರು ತಮ್ಮ ಜೀವನದ ಅತ್ಯುತ್ತಮ ನಿದ್ರೆಯನ್ನು ಪಡೆದರು ಎಂದು ಹೇಳಲಾಗುತ್ತದೆ.

The trip to the hotel tin Snowdonia, Wales takes around two hours

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!