ಇಂದು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಅನಾವರಣ: ವಿಶೇಷತೆಗಳೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಇಂದು ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರದಲ್ಲಿ ಅನಾವರಣಗೊಳ್ಳಲಿದೆ. 369 ಅಡಿ ಎತ್ತರದಲ್ಲಿ ನಿರ್ಮಿಸಲಾದ ಶಿವನ ಪ್ರತಿಮೆಯನ್ನು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಅಸೆಂಬ್ಲಿ ಸ್ಪೀಕರ್ ಸಿಪಿ ಜೋಶಿ ಮತ್ತು ಇತರ ಗಣ್ಯರು ಈ ಶಿವ ಮೂರ್ತಿಯ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿಮೆ ಸ್ಥಾಪನೆಯ ನಂತರ ರಾಜಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ (ಅಕ್ಟೋಬರ್ 29 ರಿಂದ ನವೆಂಬರ್ 6 ರವರೆಗೆ) ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಂಸ್ಥಾನ ಟ್ರಸ್ಟಿ, ಮಿರಾಜ್ ಗ್ರೂಪ್ ನ ಅಧ್ಯಕ್ಷ  ಮದನ್ ಪಲಿವಾಲ್ ತಿಳಿಸಿದ್ದಾರೆ.

Tallest Shiva Statue In World: నేడు ప్రపంచంలోనే ఎత్తయిన శివుడి విగ్రహం ఆవిష్కరణ.. దీని ప్రత్యేకతలు ఏమిటంటే..

 ಶಿವನ ಪ್ರತಿಮೆಯ ವಿಶೇಷತೆಗಳು

– ಉದಯಪುರದಿಂದ 45 ಕಿಮೀ ದೂರದಲ್ಲಿರುವ ಈ ವಿಗ್ರಹವನ್ನು ತತ್ ಪದಮ್ ಸಂಸ್ಥಾನ ನಿರ್ಮಿಸಿದೆ

-ಈ ಮೂರ್ತಿಯು ಧ್ಯಾನಸ್ಥ ಭಂಗಿಯಲ್ಲಿದ್ದು, 20 ಕಿಮೀ ದೂರದಿಂದಲೇ ಗೋಚರಿಸುತ್ತದೆ

– ಪ್ರತಿಮೆಯು ವಿಶೇಷ ದೀಪಗಳಿಂದ ಪ್ರಕಾಶಮಾನವಾಗಿ ಬೆಳಗುತ್ತದೆ ಮತ್ತು ರಾತ್ರಿ ವೇಳೆ ಕೂಡಾ ಬಹಳ ಸ್ಪಷ್ಟವಾಗಿ ಕಾಣಲಿದೆ

– ‘ವಿಶ್ವಾಸ ಸ್ವರೂಪಂ’ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯು ಒಳಗೆ ಹೋಗಲು ನಾಲ್ಕು ಲಿಫ್ಟ್‌ಗಳು ಮತ್ತು ಮೂರು ಮೆಟ್ಟಿಲು ಮಾರ್ಗಗಳಿವೆ

– ಪ್ರತಿಮೆಯನ್ನು ಪೂರ್ಣಗೊಳಿಸಲು ಹತ್ತು ವರ್ಷಗಳನ್ನು ತೆಗೆದುಕೊಂಡಿತು. 2012ರ ಆಗಸ್ಟ್‌ನಲ್ಲಿ ಅಂದಿನ ಸಿಎಂ ಅಶೋಕ್ ಗೆಹ್ಲೋಟ್ ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು

– ಪ್ರತಿಮೆ ನಿರ್ಮಾಣಕ್ಕೆ ಮೂರು ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್ ಕಾಂಕ್ರೀಟ್ ಮತ್ತು ಮರಳನ್ನು ಬಳಸಲಾಗಿದೆ

– ತಾಮ್ರದ ಬಣ್ಣದ ವಿಗ್ರಹವನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಸತು ಮಿಶ್ರಲೋಹದಿಂದ ಲೇಪಿಸಲಾಗಿದೆ

– ಈ ಪ್ರತಿಮೆ ಗಂಟೆಗೆ 250 ಕಿಲೋಮೀಟರ್ ವೇಗದ ಗಾಳಿಯನ್ನು ತಡೆದುಕೊಳ್ಳಬಲ್ಲದು

– ಈ ಪ್ರತಿಮೆಯ ವಿನ್ಯಾಸದ ವಿಂಡ್‌ ಟನಲ್ ಪರೀಕ್ಷೆಯನ್ನು ಆಸ್ಟ್ರೇಲಿಯಾದಲ್ಲಿ ಮಾಡಲಾಯಿತು

– ಪ್ರತಿಮೆಯ ಸುತ್ತಲಿನ ವೇದಿಕೆಯು ಬಂಗೀ ಜಂಪಿಂಗ್, ಜಿಪ್ ಲೈನ್, ಗೋ-ಕಾರ್ಟ್‌ನಂತಹ ಚಟುವಟಿಕೆಗಳನ್ನು ಆಯೋಜಿಸುತ್ತದೆ

– ಈ ಪ್ರದೇಶದಲ್ಲಿ ಪ್ರವಾಸಿಗರು ಟೈಂಪಾಸ್‌ ಮಾಡಲು ಫುಡ್ ಕೋರ್ಟ್, ಅಡ್ವೆಂಚರ್ ಪಾರ್ಕ್, ಜಂಗಲ್ ಕೆಫೆ ಲಭ್ಯವಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!