ಕೇರಳದಲ್ಲಿ ಅರಣ್ಯ ಒತ್ತುWorry: ಆಘಾತಕಾರಿ ಅಂಶ ಬಹಿರಂಗಗೊಳಿಸಿದೆ ವರದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ 2021-22ನೇ ಸಾಲಿನ ಅರಣ್ಯ ಇಲಾಖೆಯ ವಾರ್ಷಿಕ ನಿರ್ವಹಣಾ ವರದಿ ಹೊರಬಿದ್ದಿದ್ದು, ರಾಜ್ಯದಲ್ಲಿ ಒಟ್ಟು 5025.535 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ಆಘಾತಕಾರಿ ಅಂಶ ಬಹಿರಂಗಗೊಂಡಿದೆ.

ವರದಿಯ ಪ್ರಕಾರ ಮುನ್ನಾರ್ ವಿಭಾಗದಲ್ಲಿ ಅತಿ ಹೆಚ್ಚು ಒತ್ತುವರಿಯಾಗಿದ್ದು, ಇಲ್ಲಿ ಒತ್ತುವರಿಯಾಗಿರುವುದು ಬರೋಬ್ಬರಿ 1099.6538 ಹೆಕ್ಟೇರ್. ಇನ್ನು ವಯನಾಡ್ ದಕ್ಷಿಣ, ಮನ್ನಾರ್ಕಾಡ್, ನಿಲಂಬೂರ್ ಉತ್ತರ, ಮಂಕುಲಂ ಮತ್ತು ಕೋಟಮಂಗಲಂ ವಿಭಾಗಗಳಲ್ಲಿ ಹೆಚ್ಚು ಅರಣ್ಯ ಪ್ರದೇಶ ಅತಿಕ್ರಮಣಗೊಂಡಿದೆ.
ಉತ್ತರ ವೃತ್ತದಲ್ಲಿ ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ 1085.6648 ಹೆಕ್ಟೇರ್ ಅರಣ್ಯ ಪ್ರದೇಶ, ಇಡುಕ್ಕಿ ಪೆರಿಯಾರ್ ಪೂರ್ವ ತೆಕ್ಕಡಿ ವಿಭಾಗದಲ್ಲಿ 4,388 ಅರಳಮ್ ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯಗಳಲ್ಲಿ2,634 ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಪತ್ತನಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂ ವೃತ್ತದಲ್ಲಿ 14,60222 ಹೆಕ್ಟೇರ್ ಅರಣ್ಯ ಪ್ರದೇಶ ಅತಿಕ್ರಮಣಗೊಂಡಿದೆ.

ಕೇರಳವು 11521.814 ಚ.ಕಿ.ಮೀ. ದ ಅರಣ್ಯ ಪ್ರದೇಶ ಹೊಂದಿದ್ದು, 1977ರ ಜನವರಿ 1 ರ ನಂತರ ಒತ್ತುವರಿಯಾಗಿದ್ದ 11,917 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕೇವಲ 4628 ಹೆಕ್ಟೇರ್ ಅರಣ್ಯ ಭೂಮಿಯನ್ನು ಮಾತ್ರ ತೆರವುಗೊಳಿಸಲಾಗಿದೆ ಎಮದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!