ಎಲ್‌ಕೆಜಿ ಪುಟಾಣಿಗೆ ಲೈಂಗಿಕ ಕಾಟ: ಕಾಮುಕನಿಗೆ ಇನ್ನು 20 ವರ್ಷ ಜೈಲಿನಲ್ಲೇ ಊಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್‌ಕೆಜಿ ಪುಟಾಣಿಯನ್ನು ಗೂಡ್ಸ್ ರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 56 ವರ್ಷದ ವ್ಯಕ್ತಿಗೆ ಕೇರಳದ ನಾದಪುರಂ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಈ ಘಟನೆ 2021ರ ನವೆಂಬರ್ ತಿಂಗಳಿನಲ್ಲಿ ನಡೆದಿತ್ತು. ಆರೋಪಿಯು ಬಾಲಕಿಯನ್ನು ಪುಸುಲಾಯಿಸಿ ಗೂಡ್ಸ್ ರಿಕ್ಷಾದಲ್ಲಿ ಕರೆದೊಯ್ದು ಈ ಕೃತ್ಯ ನಡೆಸಿದ್ದ. ಪ್ರಕರಣ ಬೆಳಕಿಗೆ ಬರುತ್ತಲೇ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ 20 ವರ್ಷ ಜೈಲು ಶಿಕ್ಷೆ, 65 ಸಾವಿರ ರೂ. ದಂಡ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!