WPL | ಇಂದು RCB, ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಹಣಾಹಣಿ: ಈ ಸಲ ಕಪ್ ನಮ್ದೇ ಅಂತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಮೊದಲ ಬಾರಿಗೆ ಫೈನಲ್ ತಲುಪಿದೆ. ಇಂದು ದೆಹಲಿಯ ಅರುಣ್ ಜೆಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ WPL 2024 ರ ಫೈನಲ್ ಪಂದ್ಯದಲ್ಲಿ RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಹಣಾಹಣಿ ನಡೆಯಲಿದೆ.

ಈ ಎರಡು ತಂಡದಲ್ಲಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಬಾರಿಗೆ WPL ಫೈನಲ್ ತಲುಪಿದ್ದರೆ, ಬೆಂಗಳೂರು ಮೊದಲ ಬಾರಿಗೆ ಅಂತಿಮ ಹಂತ ತಲುಪಿದೆ. ಈ ಕಾರಣಕ್ಕಾಗಿ, ಯಾರು ಗೆದ್ದರೂ ಇದು ಇಬ್ಬರಿಗೂ ಮೊದಲ ಟ್ರೋಫಿಯಾಗಿದೆ. ಈ ಹೈ-ವೋಲ್ಟೇಜ್ ಆಟವು ರಾತ್ರಿ 7:00 ಗಂಟೆಗೆ ಆರಂಭವಾಗಲಿದ್ದು. ಈಗಾಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದ್ದು, ಉಭಯ ತಂಡಗಳ ಅಭಿಮಾನಿಗಳಲ್ಲೂ ಯಾರಪ್ಪ ಈ ಸಲ ಕಪ್ ಗೆಲ್ಲೋದು ಅನ್ನೋ ಕುತೂಹಲದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!