ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆ: ಕೇರಳದ ತಿರುವನಂತಪುರದಲ್ಲಿ ಮತ ಚಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೊಂದಲವಾಗಬೇಡಿ ಸುದ್ದಿ ಶೀರ್ಷಿಕೆ ಸರಿಯಾಗಿಯೇ ಇದೆ. ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಕೇರಳದಲ್ಲೂ ಮತದಾನ ನಡೆದಿದೆ. ಕೇರಳದಲ್ಲಿ ವಾಸಿಸುವ ರಷ್ಯಾದ ನಾಗರಿಕರು ತಮ್ಮ ದೇಶದ ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ತಿರುವನಂತಪುರದಲ್ಲಿ ಮತ ಚಲಾಯಿಸಿದ್ದಾರೆ.

ಇಲ್ಲಿನ ರಷ್ಯನ್ ಹೌಸ್‌ನಲ್ಲಿರುವ ರಷ್ಯಾದ ಒಕ್ಕೂಟದ ಗೌರವ ದೂತಾವಾಸದಲ್ಲಿ ವಿಶೇಷವಾಗಿ ವ್ಯವಸ್ಥೆಗೊಳಿಸಲಾದ ಮತಗಟ್ಟೆಯಲ್ಲಿ ರಷ್ಯಾ ನಾಗರಿಕರು ಮತ ಚಲಾಯಿಸಿದರು.

ಈ ಚುನಾವಣೆಯಲ್ಲಿ ವಿಶ್ವದ ಎಲ್ಲೆಲ್ಲಿ ರಷ್ಯಾದ ನಾಗರಿಕರು ಇದ್ದಾರೆಯೋ ಅಲ್ಲೆಲ್ಲ ಅವರು ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಇದರ ಭಾಗವಾಗಿ ತಿರುವನಂತಪುರದಲ್ಲಿ ಮತದಾನ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!