ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು: NADA ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಭಜರಂಗ್ ಪುನಿಯಾ (Wrestler Bajrang Punia) ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ.

ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು (Urine Sample) ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.

ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.

ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ.

ಈ ನಾಡಾ ಮೂತ್ರದ ಮಾದರಿಯನ್ನು ನೀಡದ್ದು ಯಾಕೆ ಎನ್ನುವುದರ ಬಗ್ಗೆ ಲಿಖಿತವಾಗಿ ಕಾರಣವನ್ನು ಮೇ 7ರ ಒಳಗಡೆ ತಿಳಿಸಬೇಕು. ಒಂದು ವೇಳೆ ಈ ಅವಧಿಯ ಒಳಗಡೆ ಸರಿಯಾದ ಕಾರಣ ನೀಡದೇ ಇದ್ದರೆ ಮುಂದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!