ಕುಸ್ತಿ ಪಂದ್ಯ ಗೆದ್ದ ಒಂದೇ ಗಂಟೆಯಲ್ಲಿ ಹೃದಯಾಘಾತದಿಂದ ಕುಸ್ತಿಪಟು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಪಂಢರಪುರ ತಾಲೂಕಿನ ಯುವ ಕುಸ್ತಿಪಟು ಮಾರುತಿ ಸುರವಾಸೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಸ್ತಿಯಲ್ಲಿ ಗೆಲುವು ಸಾಧಿಸಿದ ಮಾರುತಿ ಎಲ್ಲರ ಬಳಿ ಖುಷಿಯಿಂದ ಮಾತನಾಡುತ್ತಿದ್ದರು, ಒಂದೇ ಗಂಟೆಯಲ್ಲಿ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯುವ ಪೀಳಿಗೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, 22 ವರ್ಷದ ಯುವಕ ಹೃದಯಾಘಾತಕ್ಕೆ ಮೃತಪಟ್ಟಿರುವುದಕ್ಕೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!