ಬ್ಲಾಸ್ಟ್‌ ಆದ ಎಲ್‌ಇಡಿ ಟಿವಿ: ಹದಿಹರೆಯದ ಬಾಲಕನ ಸಾವು, ಇಬ್ಬರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ತನ್ನ ನಿವಾಸದಲ್ಲಿ ಎಲ್‌ಇಡಿ ಟಿವಿ ಸ್ಫೋಟಗೊಂಡು 17 ವರ್ಷದ ಹದಿಹರೆಯದ ಯುವಕ ಸಾವನ್ನಪ್ಪಿದ್ದಾನೆ. ಸ್ಫೋಟದಲ್ಲಿ ಆತನ ತಾಯಿ ಮತ್ತು ಸ್ನೇಹಿತ ತೀವ್ರವಾಗಿ ಗಾಯಗೊಂಡಿದ್ದು, ಸ್ಫೋಟದ ಕಾರಣ ತಿಳಿದುಬಂದಿಲ್ಲ. ಕಾರಣವನ್ನು ಗುರುತಿಸಲು ಪೋಲೀಸರು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಸ್ಫೋಟವು ಭಾರೀ ಪ್ರಮಣದಲ್ಲಿ ಸಂಭವಿಸಿದ್ದು ಮನೆಯೊಳಗಿನ ಕಾಂಕ್ರೀಟ್ ಹಾನಿಯಾಗಿದೆ. ಓಮೇಂದ್ರ ಎಂದು ಗುರುತಿಸಲಾದ ಹದಿಹರೆಯದವರಿಗೆ ಸ್ಫೋಟದಲ್ಲಿ ಗಂಭೀರ ಗಾಯಗಳಾಗಿದ್ದು, ಅವರು ಚಿಕಿತ್ಸೆಯಲ್ಲಿ ಸಾವನ್ನಪ್ಪಿದ್ದಾರೆ. ಎಲ್‌ಇಡಿ ಪರದೆಯ ಸಣ್ಣ ಮತ್ತು ಚೂಪಾದ ಕಣಗಳು ಅವರ ಮುಖ ಮತ್ತು ಕುತ್ತಿಗೆಗೆ ತಾಗಿವೆ ಎನ್ನಲಾಗುತ್ತಿದೆ.

ಅಕ್ಕಪಕ್ಕದ ಮನೆಗಳಲ್ಲಿದ್ದ ನೆರೆಹೊರೆಯವರು ಸ್ಫೋಟದಂತಹ ದೊಡ್ಡ ಶಬ್ದವನ್ನು ಕೇಳಿದ್ದು ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಊಹಿಸಿ ಮನೆ ಪ್ರವೇಶಿಸಿದ್ದಾರೆ. ಹದಿಹರೆಯದ ಬಾಲಕ, ಆತನ ಸ್ನೇಹಿತ ಕರಣ್ ಮತ್ತು ಅವನ ತಾಯಿ ಓಂವತಿ ಗಾಯಗೊಂಡಿರುವುದನ್ನು ನೋಡಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಾಜಿಯಾಬಾದ್‌ನ ಹರ್ಷ ವಿಹಾರ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!