ಹೊಸದಿಗಂತ ವರದಿ,ಮೈಸೂರು:
ಈ ಬಾರಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಅ.15 ರಿಂದ ಅ.21ರವರೆಗೆ ಆರು ದಿನಗಳ ಕಾಲ ಸಿಎಂ ಕಪ್, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ಕುಮಾರ ಹಾಗೂ ಕಿಶೋರಿ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ದಸರಾ ಕುಸ್ತಿ ಉಪಸಮಿತಿಯ ವಿಶೇಷಾಧಿಕಾರಿಯಾಗಿರುವ ಅಪರ ಪೊಲೀಸ್ ಅಧೀಕ್ಷಕಿ ಡಾ.ಬಿ.ಎನ್.ನಂದಿನಿ ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ.15 ರ ಸಂಜೆ 4 ಕ್ಕೆ ಸಿಎಂ ಸಿದ್ದರಾಮಯ್ಯ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುವರು. 16 ರಂದು ಬೆಳಿಗ್ಗೆ8 ರಿಂದ ಮದ್ಯಾಹ್ನ 2 ರವರೆಗೆ ಕುಸ್ತಿಪಟುಗಳ ದೇಹ ತೂಕ ತೆಗೆದುಕೊಳ್ಳಲಾಗುವುದು. 16 ರ ಮಧ್ಯಾಹ್ನ 3 ರಿಂದ ಎಲ್ಲಾ ವಿಭಾಗದ ಪಂದ್ಯಾವಳಿ ಚಾಲನೆ ಸಿಗಲಿವೆ. 17 ರಂದು ದಸರಾ ಕಿಶೋರ್, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ದಸರಾ ಕುಮಾರ, ದಸರಾ ಕಿಶೋರಿ ತೂಕ ತೆಗೆದುಕೊಳ್ಳಲಾಗುವುದು. ಅಂದೆ ಸಿಎಂ ಕಪ್ ಕುಸ್ತಿ ಪಂದ್ಯಾವಳಿ ಸಹ ನಡೆಯಲಿದೆ ಎಂದರು.
19, 20 ಹಾಗೂ 21 ರಂದುರoದು ಫೈನಲ್ ಪಂದ್ಯಾವಳಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.