ಯುವಕನಿಗೆ ಯಾಮಾರಿಸಿ ಬೈಕ್ ಕಳವು

ಹೊಸದಿಗಂತ ವರದಿ, ಅಂಕೋಲಾ:

ಯುವಕನೊಬ್ಬನನ್ನು ಯಾಮಾರಿಸಿದ ಇನ್ನೊಬ್ಬ ಯುವಕ ಬೆಲೆ ಬಾಳುವ ಕೆಡಿಎಂ ಕಂಪನಿಯ ಬೈಕ್ ಕದ್ದೊಯ್ದ ಘಟನೆ ತಾಲೂಕಿನ ಬಾಳೇಗುಳಿಯ ಯಮಹಾ ಶೋ ರೂಮ್ ಬಳಿ ಸಂಭವಿಸಿದೆ.
ಅರವಿಂದ ತಾಂಡೇಲ್ ಎಂಬ ಯುವಕ ಬಾಳೇಗುಳಿ ಯಮಹಾ ಶೋ ರೂಮ್ ಗೆ ಇತ್ತೀಚೆಗೆ ಖರೀದಿ ಮಾಡಿದ ಕೆಡಿಎಂ ಬೈಕಿನಲ್ಲಿ ಬಂದು ಬೇರೊಂದು ವಾಹನದ ರಿಪೇರಿ ಕುರಿತು ವಿಚಾರಣೆ ನಡೆಸಿ ಮರಳುತ್ತಿರುವ ಸಂದರ್ಭದಲ್ಲಿ ಹೀರೋ ಹೊಂಡಾ ಪ್ಲಸ್ ಬೈಕಿನಲ್ಲಿ ಬಂದ ಅಪರಿಚಿತ ಯುವಕ ತಾನು ಸಹ ಕೆಡಿಎಂ ಬೈಕ್ ಖರೀದಿ ಮಾಡಬೇಕಿದ್ದು ಒಂದು ಸುತ್ತು ಟ್ರಯಲ್ ನೋಡುವುದಾಗಿ ಕೇಳಿಕೊಂಡಿದ್ದು ಮೋಸದ ಅರಿವು ಇಲ್ಲದ ಅರವಿಂದ ತಾಂಡೇಲ್ ಬೈಕ್ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ತಾನು ತಂದ ಹೀರೋ ಹೊಂಡಾ ಬೈಕ್ ಕೀಯನ್ನು ಅರವಿಂದ ಬಳಿ ನೀಡಿ ಸುಮಾರು 2.5 ಲಕ್ಷ ಬೆಲೆಯ ಬೈಕ್ ನೊಂದಿಗೆ ಅಪರಿಚಿತ ವ್ಯಕ್ತಿ ನಾಪತ್ತೆ ಆಗಿದ್ದಾನೆ ಎನ್ನಲಾಗುತ್ತಿದೆ.
ಈ ಘಟನೆ ಬೈಕ್ ಶೋ ರೂಮಿನ ಸಿ.ಸಿ ಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ
ದೂರ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!