ಸಿದ್ದರಾಮಯ್ಯನವರಿಂದ ಕುಡಿಯವ ಶುದ್ಧ ನೀರಿನ ಯರಗೋಳ್‌ ಡ್ಯಾಂ ಲೋಕಾರ್ಪಣೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಲಾರದ ಮೂರು ತಾಲೂಕುಗಳ ಜನರ ಕನಸು ಇಂದು ನನಸಾಗಿದೆ. ಹದಿನೇಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯರಗೋಳ್‌ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಿಎಂಗೆ  ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ‌, ಬೈರತಿ ಸುರೇಶ್ ಸೇರಿದಂತೆ ಹಲವು ಶಾಸಕರುಗಳು ಸಾಥ್ ನೀಡಿದರು.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್‌ ಗ್ರಾಮದ ಬಳಿ ನಿರ್ಮಿಸಲಾಗಿರುವ ಈ ಡ್ಯಾಂ, ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕು ಹಾಗೂ 45ಗ್ರಾಮಗಳ ಜನರಿಗೆ ಕುಡಿಯುವ ಶುದ್ಧ ನೀರನ್ನು ಪೂರೈಕೆ ಮಾಡುತ್ತದೆ. ಅತಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಯರಗೋಳು ಮೂಲಕ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಈ ಡ್ಯಾಂ ನಿರ್ಮಿಸಲಾಗಿದೆ.

ಈ ಡ್ಯಾಂ ನಿರ್ಮಾಣಕ್ಕೆ 314 ಕೋಟಿ ರೂಪಾಯಿ ಖರ್ಚಾಗಿದ್ದು,  ಡ್ಯಾಂನಲ್ಲಿ 500 MCFT ಸಾಮರ್ಥ್ಯದ ನೀರು ಶೇಖರಣೆಯಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!