August 3, 2026
Monday, August 3, 2026
spot_img

ಹಿಂದೆಂದೂ ನೋಡಿರದ ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡ ಯಶ್‌! ನಟಿ ಕಿಯಾರಾ ಜೊತೆ ‌ʼತಬಾಹಿʼ ರೊಮ್ಯಾನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಕಿಯಾರಾ ಅಡ್ವಾಣಿ ಹಾಟೆಸ್ಟ್‌ ಅವತಾರ ಜನರಿಗೆ ನೋಡೋಕೆ ಸಿಕ್ಕಿದೆ. ಈಗಷ್ಟೇ ಟಾಕ್ಸಿಕ್‌ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದ್ದು, ತಬಾಹಿಯಲ್ಲಿ ಯಶ್‌ ಬೇರೇನೇ ಲೆವೆಲ್‌ನಲ್ಲಿ ಇದ್ದಾರೆ.

ಅತಿಯಾದ ರೊಮ್ಯಾಂಟಿಕ್‌ ಹಾಡು ಇದಾಗಿದ್ದು, ಸಖತ್‌ ಬೋಲ್ಡ್‌ ಅವತಾರದಲ್ಲಿ ಕಿಯಾರಾ ಹಾಗೂ ಯಶ್‌ ಕಾಣಿಸಿಕೊಂಡಿದ್ದಾರೆ. ಯಶ್‌ ದೇಹ ಗಾಗೂ ಕಿಯಾರಾ ಗ್ಲಾಮರ್‌ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ರಾಯ ಹಾಗೂ ರುಮಿ ಎನ್ನುವ ಪಾತ್ರ ಇವರದ್ದಾಗಿದ್ದು, ಸಿನಿಮಾ ಎಷ್ಟು ಅದ್ಧೂರಿಯಾಗಿದೆ ಅನ್ನೋದನ್ನು ಹಾಡಿನಲ್ಲೇ ತೋರಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಡ್​ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ. ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಭಾರಿ ಬಜೆಟ್‌ನಲ್ಲಿ ಬಂಡವಾಳ ಹೂಡಿವೆ. ಚಿತ್ರದಲ್ಲಿ ಯಶ್ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಇವರೊಂದಿಗೆ ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್‌ನ ದಂಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !