Thursday, December 8, 2022

Latest Posts

ಬಾಲಿವುಡ್ ಬ್ರಹ್ಮಾಸ್ತ್ರದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಾಯಕನ ಎಂಟ್ರಿ ನಿಜಾನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೌತ್ ಸಿನಿಮಾಗಳ ಯಶಸ್ಸು ಮತ್ತು ಬಾಲಿವುಡ್‌ನ ಸರಣಿ ಸೋಲುಗಳ ಹಿನ್ನೆಲೆ, ಬಾಲಿವುಡ್ ತಯಾರಕರು ತಮ್ಮ ಚಲನಚಿತ್ರಗಳಲ್ಲಿ ಸೌತ್ ಸ್ಟಾರ್‌ಗಳನ್ನು ತೆಗೆದುಕೊಂಡು ಅವರ ಮೂಲಕ ದಕ್ಷಿಣ ಭಾಗದಲ್ಲಿ ಪ್ರಚಾರ ಮಾಡುವ ಮೂಲಕ ಹೆಸರು ಮಾಡಲು ಪ್ರಯತ್ನಿಸುತ್ತಿದ್ದಾರೆ.  ಇತ್ತೀಚೆಗಷ್ಟೇ ರಿಲೀಸ್‌ ಆದ ಬ್ರಹ್ಮಾಸ್ತ್ರ ಸಿನಿಮಾ ಕೂಡ ಅದನ್ನೇ ಮಾಡಿದೆ. ನಾಗಾರ್ಜುನ, ಚಿರಂಜೀವಿ, ರಾಜಮೌಳಿ ಮೂಲಕ ಸಿನಿಮಾ ಪ್ರಮೊಷನ್ಸ್‌ ಮಾಡಿದರು.

ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್ ಮತ್ತು ನಾಗಾರ್ಜುನ ಅವರಂತಹ ದೊಡ್ಡ ತಾರಾಬಳಗವನ್ನು ಹೊಂದಿರುವ ‘ಬ್ರಹ್ಮಾಸ್ತ್ರ’ ಅಯಾನ್ ಮುಖರ್ಜಿ ನಿರ್ದೇಶನದ ಸಾಮಾಜಿಕ-ಪೌರಾಣಿಕ ಫ್ಯಾಂಟಸಿ ಚಲನಚಿತ್ರವಾಗಿದೆ. ಪುರಾಣದಲ್ಲಿನ ಅಸ್ತ್ರಗಳ ವಿಷಯವನ್ನು ಇಂದಿನ ತಂತ್ರಜ್ಞಾನದೊಂದಿಗೆ ಜೋಡಿಸಿ ತಯಾರಾಗಿರುವ ಈ ಸಿನಿಮಾದ ಫಲಿತಾಂಶ ಬಾಲಿವುಡ್ ಗೆ ಕೊಂಚ ನೆಮ್ಮದಿ ತಂದಿದೆ.

ಸದ್ಯ ಈ ಚಿತ್ರದ ಎರಡನೇ ಭಾಗವಾದ ‘ದೇವ್’ ಚಿತ್ರದತ್ತ ಗಮನ ಹರಿಸಿದ್ದಾರೆ ನಿರ್ದೇಶಕರು. ಮೊದಲ ಭಾಗದಲ್ಲಿ ಎಲ್ಲಾ ಸ್ಟಾರ್‌ಗಳ ಜೊತೆಗೆ, ನಿರ್ಮಾಪಕರು ಈ ಚಿತ್ರದಲ್ಲಿ ಇನ್ನೊಬ್ಬ ಸೌತ್ ಸ್ಟಾರ್ ಅನ್ನು ಆಯ್ಕೆ ಮಾಡುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ ಸ್ಯಾಂಡರ್‌ವುಡ್‌ನ ರಾಕಿಭಾಯ್‌. ದೇವ್ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತು ಗುಸುಗುಸು ಪಿಸುಪಿಸು ಕೇಳಿಬರುತ್ತಿದೆ. ಮೊದಲ ಭಾಗಕ್ಕೆ ನಾಗಾರ್ಜುನ ಹೇಗೆ ಪ್ಲಸ್ ಆದರೋ, ಯಶ್ ಎರಡನೇ ಭಾಗದ ಕ್ರೇಜ್ ಅನ್ನು ಕ್ಯಾಚ್ ಮಾಡಲು ಹೊರಟಿದ್ದಾರೆ ಎಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.

ಇದೇ ನಿಜವಾದರೆ ಯಶ್ ಬಾಲಿವುಡ್ ಗೆ ಎಂಟ್ರಿ ಕೊಡುವುದು ತುಂಬಾ ಸುಲಭ. ಕನ್ನಡದಲ್ಲೂ ಬ್ರಹ್ಮಾಸ್ತ್ರಕ್ಕೆ ದೊಡ್ಡ ಮಾರುಕಟ್ಟೆ ಇದೆ. ಕಲೆಕ್ಷನ್ ಕೂಡ ಅದ್ಧೂರಿಯಾಗುವ ಸಾಧ್ಯತೆ ಇದೆ. ಮತ್ತು ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಾದರೆ ಒಂದಷ್ಟು ದಿನ ಕಾಯಲೇಬೇಕು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!