‘ನೀವು ಒಂದು ಸಲ ಹೊಗಳಿದ್ರೆ ನೂರು ಸಲ ಹೊಗಳಿದ ಹಾಗೆ’, ರಜನಿಕಾಂತ್ ಆಶೀರ್ವಾದ ಪಡೆದ ರಿಷಭ್ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ನೋಡಿ ಮೆಚ್ಚದವರಿಲ್ಲ, ದೇಶಾದ್ಯಂತ ಕಾಂತಾರ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡದ ಸಿನಿಮಾ ಬಹುಭಾಷೆಗಳಿಗೆ ರಿಮೇಕ್ ಆಗಿದ್ದು, ಅಲ್ಲಿಯೂ ಸಿನಿಮಾ ನೋಡಿ ಜನ ಖುಷಿಪಟ್ಟಿದ್ದಾರೆ. ಇತ್ತೀಚೆಗಷ್ಟೇ ರಜನಿಕಾಂತ್ ಅವರು ಸಿನಿಮಾ ನೋಡಿ, ರಿಷಭ್ ಶೆಟ್ಟಿ ಪ್ರತಿಭೆಯನ್ನು ಹೊಗಳಿದ್ದರು. ಇದೀಗ ರಿಷಭ್ ಶೆಟ್ಟಿ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ನೀವು ಒಂದು ಬಾರಿ ಹೊಗಳಿದ್ರೆ ನೂರು ಬಾರಿ ಹೊಗಳಿದಂತೆ, ನಮ್ಮ ಸಿನಿಮಾ ನೋಡಿ ಮೆಚ್ಚಿದ್ದಕ್ಕೆ ನಾವು ಆಭಾರಿ, ಧನ್ಯವಾದಗಳು ಸರ್ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!