ಯಶ್ ನಂಬರ್​ ಒನ್​ ಆ್ಯಕ್ಟರ್​: ಕಾಫಿ ವಿತ್ ಕರಣ್ ಶೋ ನಲ್ಲಿ ಗುಣಗಾನ ಮಾಡಿದ ಬಾಲಿವುಡ್ ನಟ ಶಾಹಿದ್ ಕಪೂರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ಬಾಲಿವುಡ್​ ನಟ ಶಾಹಿದ್ ಕಪೂರ್ ಕನ್ನಡ ಚಿತ್ರರಂಗದ ರಾಕಿ ಭಾಯ್ ಯಶ್ ಅವರ ಗುಣಗಾನ ಮಾಡಿದ್ದಾರೆ. ​

ಹಿಂದಿನ ಸಂಚಿಕೆಯಲ್ಲಿ ಬಾಲಿವುಡ್​​ ನಟ ಶಾಹಿದ್ ಕಪೂರ್ ಮತ್ತು ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಈ ಶೋನ ಕೆಲವು ಕ್ಲಿಪ್​ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಶೋನಲ್ಲಿ, ಕರಣ್ ಜೋಹರ್ ಅವರು ಶಾಹಿದ್​​ರಲ್ಲಿ ನಂಬರ್​ ಒನ್​ ನಟ ಮತ್ತು ನಟಿ ಯಾರೆಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗೆ ನಟಿ ಕಿಯಾರಾ ಅಡ್ವಾನಿ ನಂಬರ್​ ಒನ್​ ಆ್ಯಕ್ಟ್ರೆಸ್​ ಎಂದು ಉತ್ತರಿಸುತ್ತಾರೆ.

ಬಳಿಕ ನಂಬರ್​ ಒನ್​ ಆ್ಯಕ್ಟರ್​ ಬಗ್ಗೆ ನಾವು ಚರ್ಚೆ ನಡೆಸಬಹುದು. ಸದ್ಯಕ್ಕೆ ರಾಕಿ ಭಾಯ್ ಯಶ್​ ಎಂದು ಉತ್ತರಿಸಿದ್ದಾರೆ. ಬಾಲಿವುಡ್​ ನಟ ಕನ್ನಡ ಚಿತ್ರರಂಗದ ಮತ್ತು ಯಶ್ ಹೆಸರು ಉಲ್ಲೇಖಿಸಿರುವುದು ಹೆಮ್ಮೆಯ ವಿಷಯ. ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!