ʼಲೈಗರ್‌ʼ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು ಗೊತ್ತಾ? ಬಿಡಗಡೆಯಾದ ಮೊದಲ ದಿನವೇ ಆನ್‌ ಲೈ‌ನ್ ನಲ್ಲಿ ಲೀಕ್!

ಹೊಸಗಂತ ಡಿಜಿಟಲ್‌ ಡೆಸ್ಕ್
ಟಾಲಿವುಡ್‌ ರೌಡಿಬಾಯ್ ವಿಜಯ್ ದೇವರಕೊಂಡ- ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಟನೆಯ ಬಹುನಿರೀಕ್ಷಿತ ಲೈಗರ್ ಚಿತ್ರ ಆಗಸ್ಟ್ 25 ರಂದು(ತಮಿಳು ಮತ್ತು ತೆಲುಗು ಆವೃತ್ತಿಗಳು) ಥಿಯೇಟರ್‌ಗಳಲ್ಲಿ ತೆರೆಕಂಡಿದ್ದರೆ, ಹಿಂದಿ ಅವೃತ್ತಿಯಲ್ಲಿ ಇಂದು ತೆರೆಗೆ ಬಂದಿದೆ. ಆದಾಗ್ಯೂ, ಲೈಗರ್‌ ಬಾಕ್ಸ್‌ ಆಫೀಸ್‌ ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪುರಿ ಜಗ್ಗನಾಥ್ ನಿರ್ದೇಶನದ ಲೈಗರ್ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಅವರ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣನ್ ಮತ್ತು ರೋನಿತ್ ರಾಯ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರ ವಿಮರ್ಷಕರು ಮತ್ತು ಆಂಧ್ರ ಬಾಕ್ಸ್ ಆಫೀಸ್ ಅಪ್‌ಡೇಟ್ ಪ್ರಕಾರ, ಲೈಗರ್  ತನ್ನ ಆರಂಭಿಕ ದಿನದಂದು‌ ದಕ್ಷಿಣದ ಮಾರುಕಟ್ಟೆಯಲ್ಲಿ ಸುಮಾರು 20 ರಿಂದ 25 ಕೋಟಿ ಗಳಿಸಿದೆ.

ಮೊದಲ ದಿನವೇ ಆನ್‌ ಲೈನ್‌ ನಲ್ಲಿ ಲೀಕ್!

Bollywoodlife.com ವೆಬ್‌ ಸೈಟ್ ಪ್ರಕಾರ, ಲೈಗರ್‌ ಮೊದಲ ದಿನವೇ ತಮಿಳುರಾಕರ್ಸ್, ಫಿಲ್ಮಿಜಿಲ್ಲಾ, ಟೆಲಿಗ್ರಾಮ್ ಮತ್ತು ಮೂವಿರೂಲ್ಜ್‌ ವೆಬ್‌ ಸೈಟ್‌ ಗಳಲ್ಲಿ ಸೋರಿಕೆಯಾಗಿದೆ. ಇವು ಕುಖ್ಯಾತ ಸೈಟ್‌ಗಳಾಗಿದ್ದು, ಇತ್ತೀಚಿನ ಎಲ್ಲಾ ಪ್ರಮುಖ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಭಾರೀ ವ್ಯತ್ಯಾಸ ಕಾಣುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!