ಇಯರ್‌ಎಂಡ್ ರಜೆ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಜನದಟ್ಟಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಇನ್ನೇನು ಹಬ್ಬಗಳು ಇರುವಾಗ, ಇಯರ್‌ಎಂಡ್ ರಜೆ ಸಮಯದಲ್ಲಿ ಬೆಂಗಳೂರಿನ ಮೆಜೆಸ್ಟಿಕ್,ಯಶ್ವಂತಪುರದಲ್ಲಿ ಜನಜಂಗುಳಿ ಕಾಣುವುದು ಸಾಮಾನ್ಯ.

ಆದರೆ ಹವಾಮಾನ ವೈಪರೀತ್ಯ ಹಾಗೂ ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮೆಜೆಸ್ಟಿಕ್‌ನಲ್ಲಿ ಇರುವ ರೀತಿ ಜನದಟ್ಟಣೆ ಕಾಣಿಸಿದೆ.

ಚಳಿ, ಮಳೆಗೆ ಹೆದರಿದ ಮಂದಿ ವಿಮಾನ ಹತ್ತೋಕೆ ತಯಾರಾಗಿದ್ದಾರೆ. ಏರ್‌ಪೋರ್ಟ್‌ನ 10 ಗೇಟ್‌ಗಳಲ್ಲಿಯೂ ಕ್ಯೂ ಹೆಚ್ಚಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈಲು, ಬಸ್ ಹತ್ತೋಕೆ ಇಷ್ಟಪಡದ ಜನ ಬೇಗ ಮನೆ ಸೇರಲು ವಿಮಾನದ ಮೊರೆ ಹೋಗಿದ್ದಾರೆ. ವಿಮಾನ ನಿಲಾಣದಲ್ಲಿ ಮೆಟ್ರೋ ಕ್ಯೂ ರೀತಿ ಕಾಣುವ ಕ್ಯೂಗಳು ನಿರ್ಮಾಣವಾಗಿರುವ ದೃಶ್ಯ ಕಂಡುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!