ಯಾವಾಗಲೂ ಯಡಿಯೂರಪ್ಪಗೆ ತಂದೆ ಸ್ಥಾನ, ಶ್ರೀರಾಮುಲುಗೆ ಮಗನ ಸ್ಥಾನ: ಜನಾರ್ಧನ ರೆಡ್ಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜಕಾರಣದಲ್ಲಿ ನಾನು ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೇ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಭೇದಭಾವ ಇರಲ್ಲ ಎಂದು ಎಂದು ಕೆಆರ್‌ಪಿಪಿ ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಳೆ ಬೆಳಗ್ಗೆ ಬಿಜೆಪಿ ಕಚೇರಿಗೆ ಬರೋಕೆ ಹೇಳಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಸಮ್ಮುಖದಲ್ಲಿ ನಾಳೆ ಬಿಜೆಪಿ ಸೇರುತ್ತೇನೆ. ಲೋಕಸಭಾ ಚುನಾವಣೆ ‌ನಿಲ್ಲುವ ವಿಚಾರ ಇಲ್ಲ. ಇನ್ನು ಶ್ರೀರಾಮುಲುಗೆ ಬೆಂಬಲ ನೀಡುವ ವಿಚಾರ ಹಾಗೂ ಬಳ್ಳಾರಿಯಿಂದ ದೂರ ಉಳಿದಿದಕ್ಕೆ ಸಾಕಷ್ಟು ಚರ್ಚೆ ಆಯ್ತು. ಆದರೆ, ನಾನು KRPP ಪಕ್ಷ ಘೋಷಣೆ ಮಾಡುವ ಮೊದಲ ದಿನ ಹೇಳಿದಂತೆ, ಯಡಿಯೂರಪ್ಪ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೆ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಭೇದಭಾವ ಇರಲ್ಲ. ನಾನು ಮತ್ತೆ ತಾಯಿ ಬಿಜೆಪಿ ಮಡಲಿಗೆ ಸೇರ್ಪಡೆ ಆಗುತ್ತಿದ್ದೇನೆ. ಎಲ್ಲರೂ ಒಟ್ಟಾಗಿ ಮೋದಿ ಪ್ರಧಾನಿ ಆಗಲು ಶ್ರಮ ಪಡುತ್ತೇವೆ ಎಂದರು.

ನಾನು ಬಿಜೆಪಿಯಲ್ಲಿ ಚಿಕ್ಕ ವಯಸ್ಸಿನಿಂದ ಕೂಡ ಅಡ್ವಾಣಿ ಜೊತೆಗೆ ರಥಯಾತ್ರೆಯಲ್ಲಿ ಭಾಗವಹಿಸಿದ್ದೆನು. ಅದರೆ ಮದ್ಯದಲ್ಲಿ ಆಗಿರುವ ಎಲ್ಲಾ ಘಟನೆಗಳು ನಿಮಗೆ ಗೊತ್ತಿವೆ. ಉಳಿದಿದ್ದು ನಾಳೆ ಮಾತನಾಡುತ್ತೇನೆ. ಬಿಜೆಪಿಯ ಎಲ್ಲಾ ಹಿರಿಯ ನಾಯಕರಿಂದ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬ ವಿಚಾರದಲ್ಲಿ, ನಾನು ಸಹ ತಾಯಿ ಸಮನಾದ ಬಿಜೆಪಿ ಪಕ್ಷಕ್ಕೆ ಮರಳಲು ಮನಸ್ಸು ಮಾಡುವ ಮೊದಲು, ನನ್ನ ಕಷ್ಟದ ಜೊತೆಗೆ ಇದ್ದ ಎಲ್ಲಾ ಕಾರ್ಯಕರ್ತರು ಮುಖಂಡರ ಜೊತೆಗೆ ಚರ್ಚೆ ಮಾಡಿದ್ದೇನೆ. ಚಿತ್ರದುರ್ಗ, ಬಳ್ಳಾರಿ ರಾಯಚೂರು ಕೊಪ್ಪಳ ಕಲಬುರಗಿ , ಕೊಪ್ಪಳ ಜಿಲ್ಲೆಯಲ್ಲಿ ನನ್ನ ಬೆಂಬಲಿಸಿದವರಿಂದ ಅವರ ಅಭಿಪ್ರಾಯ ಪಡೆಯುವ ಕೆಲಸ ಮಾಡಿದ್ದೇನೆ. ಎಲ್ಲರೂ ಮುಕ್ತ ಕಂಠದಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲವಾಗಿ ನಿಂತು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಡೀ ವಿಶ್ವದಲ್ಲೇ ಭಾರತವನ್ನು ವಿಶ್ವಗುರು ಆಗುವಂತೆ ಮಾಡಿದ್ದಾರೆ. ಕೇವಲ 10 ವರ್ಷಗಳಲ್ಲಿ ಭಾರತಕ್ಕೆ ಈ ಖ್ಯಾತಿ ಬಂದಿದೆ. ಹೀಗಾಗಿ, ಮೊರನೇ ಬಾರಿ ಮೋದಿ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಅಭಿಪ್ರಾಯ ಆಗಿದೆ. ಆ ವಿಚಾರದಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!