ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಲಿವುಡ್ನ `ಯೇ ಜವಾನಿ ಹೇ ದಿವಾನಿ’ ಚಿತ್ರದ ಪೋಷಕ ನಟಿ ಎವೆಲಿನ್ ಮತ್ತೊಮ್ಮೆ ತಾಯಿಯಾಗಿದ್ದಾರೆ.
ಬಾಲಿವುಡ್ನ ಸಾಹೋ, ನೌಟಂಕಿ ಸಾಲಾ, ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಎವೆಲಿನ್ ಶರ್ಮಾ, ಎರಡನೇ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ.
ಈಗಾಗಲೇ ನವೆಂಬರ್ನಲ್ಲಿ ಮೊದಲ ಮಗುವನ್ನ ನಟಿ ಬರಮಾಡಿಕೊಂಡಿದ್ದರು.
ಮೇ 15, 2021ರಂದು ತುಷಾನ್ ಜೊತೆ ಎವೆಲಿನ್ ಮದುವೆಯಾಗಿದ್ದರು. ನವೆಂಬರ್ನಲ್ಲಿ ಮೊದಲ ಮಗು ಜನಿಸಿತು.
ಸಾಮಾಜಿಕ ಜಾಲತಾಣದಲ್ಲಿ ಎವೆಲಿನ್ ಮಗುವಿನ ಬಂಪ್ನೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿಯ ಸೆಲೆಬ್ರಿಟಿ ಸ್ನೇಹಿತರು ಮತ್ತು ಅಭಿಮಾನಿಗಳು ಪೋಸ್ಟ್ನಲ್ಲಿ ಶುಭಹಾರೈಸಿದ್ದಾರೆ.