ಜಮ್ಮು-ಕಾಶ್ಮೀರದತ್ತ ಹೊರಟ ಭಾರತ್ ಜೋಡೋ ಯಾತ್ರೆಗೆ ಶಾಕ್:  ಕಾಂಗ್ರೆಸ್‍ ಗೆ ರಾಜೀನಾಮೆಕೊಟ್ಟ ರಾಜ್ಯ ವಕ್ತಾರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜಮ್ಮು-ಕಾಶ್ಮೀರದತ್ತ  (Jammu Kashmi) ಭಾರತ್ ಜೋಡೋ ಯಾತ್ರೆ (Bharat Jodo Yatre) ತಲುಪುತಿದ್ದು, ಇದರ ನಡುವೆ  ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ. ಸಂಸದ ರಾಹುಲ್ ಗಾಂಧಿ ನಡೆ ಖಂಡಿಸಿರುವ ರಾಜ್ಯ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ (Deepika PushkarNath) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ (Rahul Gandhi) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕಥುವಾ ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿರುವುದು, ಪಕ್ಷ ಸೇರ್ಪಡೆ ಪ್ರಸ್ತಾಪ ಗಮನಿಸಿದರೆ ರಾಜೀನಾಮೆ ಹೊರೆತು ಬೇರೆ ಆಯ್ಕೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.


ಮ್ಮು ಮೂಲದ ಮಾನವ ಹಕ್ಕುಗಳ ವಕೀಲರಾದ ದೀಪಿಕಾ ಪುಷ್ಕರ್ ನಾಥ್, ಕಥುವಾ ಅತ್ಯಾಚಾರ ಸಂತ್ರಸ್ತೆಯ ಪರ ಪ್ರಕರಣವನ್ನು ಮುನ್ನಡೆಸಿದ್ದರು. ಆರಂಭದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸಿದ್ದರು. ಇದೇ ಕಾರಣಕ್ಕೆ ದೀಪಿಕಾ ಪುಷ್ಕರ್ ನಾಥ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಜನವರಿ 2018 ರ ಮೊದಲ ವಾರದಲ್ಲಿ ಅಲೆಮಾರಿ ಮುಸ್ಲಿಂ ಬ್ಯಾಕರ್‍ವಾಲ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮದಿಂದ ಅಪಹರಿಸಲಾಗಿತ್ತು. ಅವಳನ್ನು ಒಂದು ಸಣ್ಣ ಸ್ಥಳೀಯ ದೇವಸ್ಥಾನದಲ್ಲಿ ಬಂಧಿಸಿ ಮಾದಕವಸ್ತು ನೀಡಿ ಅತ್ಯಾಚಾರ ಮಾಡಲಾಯಿತು, ಬಳಿಕ ಕೊನೆಗೆ ಆಕೆಯ ಕತ್ತು ಹಿಸುಕಿ ಕೊಲ್ಲಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!