ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ನಟ ವಿಜಯ್ ದೇವರಕೊಂಡ ಇದೀಗ ಸಿನಿಮಾಗಿಂತ ಅವರ ವೈಯಕ್ತಿಕ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಹೌದು, ನಾನು ಪ್ರೀತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಯಾರನ್ನಾದರೂ ಸರಿಯಾಗಿ ತಿಳಿದುಕೊಂಡು ಸ್ನೇಹ ಬೆಳೆಸಿದ ನಂತರವೇ ಅವರಿಗೆ ನಾನು ಹತ್ತಿರವಾಗುತ್ತೇನೆ. ನಾನು ಡೇಟ್‌ಗೆ ಹೋಗುವುದಿಲ್ಲ ಎಂದಿದ್ದಾರೆ.
ಮದುವೆ ಮಹಿಳೆಯರಿಗೆ ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಮದುವೆ ಯಾರ ವೃತ್ತಿಗೂ ಅಡ್ಡಿಯಾಗಬಾರದು. ಮಹಿಳೆಯರಿಗೆ ಮದುವೆ ಕಷ್ಟ. ಇದು ನೀವು ಮಾಡುತ್ತಿರುವ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಈ ವೇಳೆ, ರಿಲೇಷನ್‌ಶಿಪ್‌ನಲ್ಲಿರೋದಾಗಿ ನಟ ಒಪ್ಪಿಕೊಂಡರು. ಇನ್ನೂ ನಟನ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ಎಂಗೇಜ್ ಆಗಿದ್ದಾರೆ ಎಂದೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಿಜಯ್ ಡೇಟಿಂಗ್ ವಿಚಾರ ಕೇಳಿ ಮಹಿಳಾಭಿಮಾನಿಗಳಿಗೆ ಬೇಸರವಾಗಿದೆ.