ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕರಾಳ ಘಟನೆಗಳಲ್ಲಿ ಒಂದಾದ ಗೋದ್ರಾ ಘಟನೆಯನ್ನು ಆಧರಿಸಿ ‘ದಿ ಸಾಬರಮತಿ ರಿಪೋರ್ಟ್’ ಹೆಸರಿನ ಸಿನಿಮಾ ನಿರ್ಮಾಣವಾಗಿದ್ದು ಕೆಲ ದಿನಗಳ ಹಿಂದಷ್ಟೆ ಸಿನಿಮಾ ಬಿಡುಗಡೆ ಆಗಿದೆ.
ವಿಕ್ರಾಂತ್ ಮೆಸ್ಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಸತ್ಯ ಹೊರಗೆ ಬರಬೇಕು’ ಎಂದಿದ್ದರು. ನರೇಂದ್ರ ಮೋದಿಯವರ ಮೆಚ್ಚುಗೆ ಲಭ್ಯವಾದ ಬೆನ್ನಲ್ಲೆ, ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿತ್ತು. ಮಧ್ಯ ಪ್ರದೇಶದ ಬಳಿಕ ಈಗ ಬಿಜೆಪಿ ಆಡಳಿತವಿರುವ ಮತ್ತೊಂದು ರಾಜ್ಯವಾದ ಹರಿಯಾಣಾನಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ.
ಹರಿಯಾಣದ ಸಿಎಂ ನಯಾಬ್ ಸಿಂಗ್ ಸೈನಿ ಅವರು ಇತ್ತೀಚೆಗಷ್ಟೆ ತಮ್ಮ ಸಂಪುಟದ ಕೆಲವು ಸಚಿವರೊಟ್ಟಿಗೆ ಸೇರಿ ‘ದಿ ಸಾಬರಮತಿ ರಿಪೊರ್ಟ್’ ಸಿನಿಮಾ ವೀಕ್ಷಿಸಿದ್ದು, ಈ ಸಂದರ್ಭದಲ್ಲಿ ಕೆಲ ಕೇಂದ್ರ ಮಂತ್ರಿಗಳು ಸಹ ಹಾಜರಿದ್ದರು. ಸಿನಿಮಾದ ನಿರ್ಮಾಪಕಿ ಏಕ್ತಾ ಕಪೂರ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಸಿನಿಮಾ ನೋಡಿದ ಸಿಎಂ, ಎಲ್ಲರೂ ನೋಡಬೇಕಾದ ಸಿನಿಮಾ ಇದೆಂದು ಕೊಂಡಾಡಿದರು. ಬಳಿಕ ಹರಿಯಾಣಾದಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ.