ಯೋಗ ದಿನಾಚರಣೆಯಂದು ಯೋಧರ ಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೋಲೀಸರು ಹಿಮಚ್ಛಾದಿತ ಪ್ರದೇಶಗಳಲ್ಲಿ ವಿವಿಧ ಯೋಗಾಸನಗಳನ್ನು ಮಾಡಿದರು.

ಸಮುದ್ರ , ಮಟ್ಟದಿಂದ 17,000 ಮೀಟರ್ ಎತ್ತರದಲ್ಲಿರುವ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವ ಪ್ರದೇಶವಾದ ಲಡಾಖ್‌ನಲ್ಲಿ ಐಟಿಬಿಪಿ ಯೋಗವು ದೇಶಕ್ಕೆ ಯೋಗದ ಮಹತ್ವವನ್ನು ಸಾರುವಂತಿದೆ. ಮೈನಸ್‌ ಡಿಗ್ರಿ ವಾತಾವರಣದಲ್ಲಿ ವಿವಿಧ ಯೋಗದ ಭಂಗಿಗಳನ್ನು ಪ್ರದರ್ಶಿಸುವುದು ಸುಲಭದ ಮಾತಲ್ಲ. ಯೋಗವು ಆತ್ಮಸ್ಥೈರ್ಯವನ್ನು ಕೊಡುವುದರೊಂದಿಗೆ ಶಾರೀರಿಕ ಸದೃಢತೆಯನ್ನು ಕೊಡುತ್ತದೆ ಎಂಬುದಕ್ಕೆ ಯೋಧರ ಈ ಯೋಗ ಸಾಕ್ಷಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!