ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀರತ್- ಯುಪಿ ಸಚಿವ ಧರಂಪಾಲ್ ಸಿಂಗ್ ಅಂತರಾಷ್ಟ್ರೀಯ ಯೋಗ ದಿನದಂದು ಕೈಲಾಶ್ ಪ್ರಕಾಶ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅಧಿಕಾರಿಗಳೊಂದಿಗೆ ಯೋಗ ಮಾಡಿದರು.
ರಾಜ್ಯಸಭಾ ಸಂಸದ ವಿಜಯಪಾಲ್ ತೋಮರ್, ಕಾಂತಾ ಕರ್ದಮ್, ಡಿಎಂ ದೀಪಕ್ ಮೀನಾ, ಸಿಡಿಒ ನೂಪುರ್ ಗೋಯಲ್, ಸಿಎಂಒ ಡಾ. ಅಖಿಲೇಶ್ ಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಯೋಗದಿಂದ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದು ಸಚಿವ ಧರಂಪಾಲ್ ಹೇಳಿದರು. ಒತ್ತಡದಿಂದ ದೂರವಿರಲು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿ.ಎಂ.ದೀಪಕ್ ಮೀನಾ ಸಲಹೆ ನೀಡಿದರು.