ನೀನು ಸೂಪರ್ ಸ್ಟಾರ್, ಮೈ ಬೇಬಿ ಗರ್ಲ್: ಸುಕೇಶ್ ನಿಂದ ಜಾಕ್ವೆಲಿನ್ ಫರ್ನಾಂಡೀಸ್​ಗೆ ಮತ್ತೆ ಬಂತು ಪ್ರೇಮಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ (Sukesh Chandrashekhar)ತನ್ನ ಗೆಳತಿ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರನ್ನು ಹೇಳುತ್ತಿದ್ದು, ಆಗಾಗ್ಗೆ ಜೈಲಿನಿಂದ ಜಾಕ್ವೆಲಿನ್ ಫರ್ನಾಂಡೀಸ್​ಗೆ ಪ್ರೇಮಪತ್ರಗಳನ್ನು ಬರೆಯುತ್ತಿರುತ್ತಾನೆ.

ಇದೀಗ ಮತ್ತೆ ತಮ್ಮ ವಕೀಲರ ಮೂಲಕ ಜಾಕ್ವೆಲಿನ್​ಗೆ ಉದ್ದನೆಯ ಪ್ರೇಮಪತ್ರ ಬರೆದಿದ್ದು ಜಾಕ್ವೆಲಿನ್​ಗೆ ದೊಡ್ಡ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಾನೆ.

ತಾನು ಜಾಕ್ವೆಲಿನ್​ಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ. ಅದರ ಜೊತೆಗೆ ಇತ್ತೀಚೆಗೆ ಫಿಲಂಫೇರ್ ಕಾರ್ಯಕ್ರಮದಲ್ಲಿ ಜಾಕ್ವೆಲಿನ್ ಮಾಡಿದ ನೃತ್ಯವನ್ನು ಹೊಗಳಿದ್ದಾನೆ. ”ನನ್ನ ಬೇಬಿ, ನನ್ನ ಪ್ರೀತಿಯೇ, ನನ್ನ ಬೊಮ್ಮ ಜಾಕ್ವೆಲಿನ್ ನಾನು ಏಪ್ರಿಲ್ 28 ರಂದು ಫಿಲಂಫೇರ್ ನೋಡಿದೆ. ನಿನ್ನ ನೃತ್ಯ ಅತ್ಯದ್ಭುತವಾಗಿತ್ತು. ಇಡೀ ಶೋನಲ್ಲಿ ನಿನ್ನ ನೃತ್ಯವೇ ಹೈಲೆಟ್. ನೀನು ಸೊಗಸಾಗಿ ಕಾಣುತ್ತಿದ್ದೆ, ಕ್ಲಾಸಿ, ಸೂಪರ್-ಹಾಟ್ ಆಗಿ ಕಾಣುತ್ತಿದ್ದೆ. ನಾನು ಇನ್ನಷ್ಟು ಬಲವಾಗಿ ನಿನ್ನನ್ನು ಪ್ರೀತಿಸುವಂತೆ ನೀನು ಮಾಡಿದೆ. ನಿನ್ನನ್ನು ಹೊಗಳಲು ನನಗೆ ಪದಗಳಿಲ್ಲ, ನೀನು ಸೂಪರ್ ಸ್ಟಾರ್, ಮೈ ಬೇಬಿ ಗರ್ಲ್ ಎಂದು ಬರೆದಿದ್ದಾನೆ.

ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ನನ್ನ ರಾಣಿ, ಬೊಟ್ಟ ಬೊಮ್ಮಾ, ನನ್ನ ದೇಹದ ಪ್ರತಿ ಕಣಕಣವೂ ನಿನ್ನನ್ನು ಪ್ರೇಮಿಸುತ್ತದೆ. ನನ್ನ ಜೀವನದ ಪ್ರತಿ ಸೆಕೆಂಡ್ ನಿನ್ನ ಬಗ್ಗೆಯೇ ಯೋಚಿಸುತ್ತೇನೆ. ನಾನು ನಿನ್ನನ್ನು ಎಷ್ಟು ಹುಚ್ಚನಂತೆ ಪ್ರೀತಿಸುತ್ತೇನೆ ಎಂದು ನಿನಗೂ ಗೊತ್ತು, ನೀನು ನನ್ನನ್ನು ಎಷ್ಟು ಹುಚ್ಚುತನದಿಂದ ಪ್ರೀತಿಸುತ್ತೀಯೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜನ್ಮದಿನದಂದು ನಿನಗೆ ದೊಡ್ಡ ಸೂಪರ್ ಸರ್ಪ್ರೈಸ್ ಇದೆ, ಆ ಸರ್ಪ್ರೈಸ್ ನಿನಗೆ ಇಷ್ಟವಾಗುತ್ತದೆ. ನಾನು ನನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದೇನೆ. ನನಗೆ ಕಾಯಲು ಸಾಧ್ಯವಿಲ್ಲ. ಬೇಬಿ ನೀನು ನಗುತ್ತಿರಬೇಕೆಂದು ನಾನು ಬಯಸುತ್ತೇನೆ, ನಾನು ಇಲ್ಲಿದ್ದೇನೆ, ಸತ್ಯದ ಕ್ಷಣಗಣನೆ ಪ್ರಾರಂಭವಾಗಿದೆ, ಚಿಂತಿಸಬೇಡ ಬೇಬ” ಎಂದು ಭಾವುಕವಾಗಿ ಪತ್ರ ಬರೆದಿದ್ದಾನೆ.

ಸುಕೇಶ್ ಚಂದ್ರಶೇಖರ್ ಮಹಾ ವಂಚಕ ಹಾಗೂ ಸುಲಿಗೆಕೋರನಾಗಿದ್ದು ಈ ವರೆಗೆ ಹಲವು ಖ್ಯಾತನಾಮ ರಾಜಕಾರಣಿಗಳು, ಉದ್ಯಮಿಗಳಿಗೆ ವಂಚಿಸಿ ನೂರಾರು ಕೋಟಿ ಹಣ ಗಳಿಸಿದ್ದಾನೆ. ತಮಿಳುನಾಡಿನ ಜನಪ್ರಿಯ ರಾಜಕಾರಣಿಗೆ ನೂರಾರು ಕೋಟಿ ವಂಚಿಸಿದ್ದ ಸುಕೇಶ್, ಅದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದನು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!