‘ಸಂದರ್ಶನಕ್ಕೆ ನೀವೊಬ್ಬರೇ ಅಲ್ಲ, ನಿಮ್ಮ ತಂದೆ-ತಾಯಿಯನ್ನೂ ರೆಡಿಮಾಡಿ’ ಫನ್ನಿ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳು ಒಂದು ವಯಸ್ಸಿಗೆ ಬಂದ ನಂತರ ಪೋಷಕರು ಸ್ನೇಹಿತರಾಗಿ ಬಿಡುತ್ತಾರೆ ಅನ್ನೋ ಮಾತಿದೆ, ಅಂತೆಯೇ ಇಲ್ಲೊಂದು ಫನ್ನಿ ವಿಡಿಯೋ ಇದೆ, ಮಗಳ ಗಂಭೀರವಾದ ಸಂದರ್ಶನ ಅಮ್ಮನ ಒಂದು ನಗುವಿನಿಂದ ತಮಾಷೆಯ ಸಂದರ್ಶನವಾಗಿಬಿಡುತ್ತದೆ.

ವಿಡಿಯೋದಲ್ಲಿ ಏನಿದೆ?
ಮಗಳು ಶಾಲೆಯ ಸಂದರ್ಶನವೊಂದರಲ್ಲಿ ಪಾಲ್ಗೊಂಡಿರುತ್ತಾಳೆ. ಇಲ್ಲಿ ತನ್ನ ಬಗ್ಗೆ, ತನ್ನ ದಿನಚರಿ ಬಗ್ಗೆ ಆಕೆ ಹೇಳಿಕೊಳ್ಳುತ್ತಿರುತ್ತಾಳೆ. ಹೆಸರು ಹೇಳಿದ ನಂತರ ನನ್ನ ದಿನವನ್ನು ಹೇಗೆ ಶುರು ಮಾಡುತ್ತೀನಿ ಗೊತ್ತಾ, ದಿನವೂ ಐದು ಗಂಟೆಗೆ ಏಳುತ್ತೇನೆ ಎಂದು ಆಕೆ ಹೇಳುತ್ತಾಳೆ.

ಹಿಂದೆಯೇ ಇರುವ ತಾಯಿ ಪುಸುಕ್ ಎಂದು ನಕ್ಕಿದ್ದಾರೆ, ನಗುವೆಂಬ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎನ್ನುವ ಹಾಗೆ, ಮಗಳು ಹಾಗೂ ತಂದೆ ಕೂಡ ನಗೋದಕ್ಕೆ ಶುರು ಮಾಡ್ತಾರೆ.
ಮಗಳು ಸಂದರ್ಶನ ಅನ್ನೋದನ್ನು ನೆನಪು ಮಾಡಿಕೊಂಡು ಮುಂದುವರಿಯುತ್ತಾಳೆ, ಐದು ಗಂಟೆಗೆ ಎದ್ದು ಜಾಗಿಂಗ್ ಹೋಗುತ್ತೇನೆ, ಆರು ಗಂಟೆಗೆ ಮನೆಗೆ ಬರುತ್ತೇನೆ, ಅಪ್ಪ ಅಮ್ಮ ಇನ್ನೂ ಮಲಗಿರುತ್ತಾರೆ. ಅವರು ಏಳುವುದರೊಳಗೆ ತಿಂಡಿ ಮಾಡುತ್ತೇನೆ ಎನ್ನುತ್ತಾಳೆ. ಈ ಸುಳ್ಳನ್ನು ತಡೆಯಲಾಗದ ತಾಯಿ ಸಿಕ್ಕಾಪಟ್ಟೆ ನಕ್ಕುಬಿಡುತ್ತಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇನ್ಮೇಲೆ ನೀವೊಬ್ಬರೇ ಅಲ್ಲ, ಅಪ್ಪ ಅಮ್ಮನನ್ನೂ ಇಂಟರ್ವ್ಯೂಗೆ ರೆಡಿ ಮಾಡಿ, ಇಲ್ಲವಾದ್ರೆ ಹೀಗೆ ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!