NIA RAID | ಇಡುಕ್ಕಿ, ತಿರುವನಂತಪುರ ಜಾಲಾಡಿದ ಟೀಮ್: ಕರಪತ್ರ, ಪೆನ್‌ಡ್ರೈವ್, ಮೊಬೈಲ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಳ್ಳಂಬೆಳಗ್ಗೆ ಕೇರಳಕ್ಕೆ ಶಾಕ್ ನೀಡಿರುವ ಎನ್‌ಐಎ, ಪಿಎ-ಐ ಸಂಘಟನೆಯ ಶಕ್ತಿಕೇಂದ್ರಕ್ಕೆ ಭರ್ಜರಿ ಆಘಾತ ನೀಡಿದೆ.
ಇಡುಕ್ಕಿ, ತಿರುವನಂತಪುರ ಜಿಲ್ಲೆಗಳ ಹಲವೆಡೆಗಳಲ್ಲಿ ಜಾಲಾಡಿರುವ ತಂಡಕ್ಕೆ ಮಹತ್ವದ ದಾಖಲೆಗಳು, ಕರಪತ್ರಗಳು, ಪೆನ್‌ಡ್ರೈವ್‌ಗಳು ಸಿಕ್ಕಿದ್ದು, ಇವುಗಳನ್ನು ವಶಪಡಿಸಿಕೊಂಡು ತನಿಖೆ ಇನ್ನಷ್ಟು ತೀವ್ರಗೊಳಿಸಿದೆ.
ತಿರುವನಂತಪುರ ಜಿಲ್ಲೆಯೊಂದರಲ್ಲಿಯೇ ಬರೋಬ್ಬರಿ 50 ಕಡೆಗಳಲ್ಲಿ ಇಂದು ದಾಳಿ ನಡೆದಿದೆ.

ದಾಳಿಯ ವೇಳೆ ನಾಲ್ಕು ಮೊಬೈಲ್‌ಫೊನ್, ಪಿಎ-ಐ ರಾಷ್ಟ್ರೀಯ ನಾಯಕ ಅಶ್ರಫ್ ಮೌಲವಿಗೆ ಸೇರಿದ ಪೂಂತೂರ ಮನೆಯಿಂದ ಪೆನ್‌ಡ್ರೈಗಳನ್ನು ತಂಡ ಸ್ವಾನಕ್ಕೆ ಪಡೆದಿದೆ. ಇನ್ನು ತೊಡುಪುಳ ಕುಮ್ಮಕಲ್‌ನಲ್ಲಿರುವ ಪಿಎಫ್‌ಐನ ಇಡುಕ್ಕಿ ಜಿಲ್ಲಾ ಸಮಿತಿ ಕಚೇರಿಯಿಂದ ಕೂಡಾ ನೋಟಿಸ್‌ಗಳು, ಪುಸ್ತಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ಬಗ್ಗೆ ಯಾವುದೇ ವಿವರ ನೀಡಲು ತನಿಖಾಽಕಾರಿಗಳು ನಿರಾಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!