ನೀವು ನಮ್ಮ ನಿಜವಾದ ‘ಸ್ನೇಹಿತ’ ಸಹಾಯಕ್ಕೆ ಆಭಾರಿ: ಭಾರತಕ್ಕೆ ಟರ್ಕಿ ಧನ್ಯವಾದ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೀವ್ರ ಭೂಕಂಪಕ್ಕೆ ಟರ್ಕಿ ತತ್ತರಿಸುತ್ತಿದ್ದಂತೆ ಭಾರತ ತನ್ನ ರಕ್ಷಣಾ ಮತ್ತು ವೈದ್ಯಕೀಯ ತಂಡಗಳನ್ನು ಕಳುಹಿಸಿ ಸಹಾಯಕ್ಕೆ ನಿಂತಿದೆ. ಸಧ್ಯ ಭಾರತದ ನೆರವಿಗೆ ಟರ್ಕಿ ಧನ್ಯವಾದ ಅರ್ಪಿಸಿದ್ದು, ನೀವು ನಮ್ಮ ನಿಜವಾದ ಸ್ನೇಹಿತ ಎಂದು ಶ್ಲಾಘಿಸಿದೆ.

ಈ ಬಗ್ಗೆ ಮಾತನಾಡಿದ ಭಾರತದಲ್ಲಿನ ಟರ್ಕಿ ರಾಯಭಾರಿ, ಭಾರತದ ಪ್ರಾಮಾಣಿಕ ಮತ್ತು ದಯಾಪರ ಸಹಾಯವನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ ಎಂದರು.

ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಭಾರತವು ಟರ್ಕಿಗೆ ನೀಡಿದ ಸಹಾಯವನ್ನ ನಾವು ಶ್ಲಾಘಿಸುತ್ತೇವೆ. ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡುವವರನ್ನ ನಿಜವಾಗಿಯೂ ಸ್ನೇಹಿತ ಎಂದು ನಾನು ಹೇಳುತ್ತೇನೆ. ಯಾಕಂದ್ರೆ, ಸ್ನೇಹಿತರು ಪರಸ್ಪರ ಸಹಾಯ ಮಾಡುತ್ತಾರೆ ಎಂದರು.

ಅಂದ್ಹಾಗೆ, ಟರ್ಕಿಯಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡು ಗಂಟೆಗಳ ನಂತರ ಟರ್ಕಿಯಲ್ಲಿ 7.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಆಗ್ನೇಯ ಟರ್ಕಿಯಲ್ಲಿ 14 ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ಇದು ದೊಡ್ಡ ವಿಪತ್ತು. 21,103 ಜನರು ಗಾಯಗೊಂಡಿದ್ದಾರೆ, ಸುಮಾರು 6000 ಕಟ್ಟಡಗಳು ಕುಸಿದಿವೆ, 3 ವಿಮಾನ ನಿಲ್ದಾಣಗಳಿಗೆ ಹಾನಿಯಾಗಿದೆ ಎಂದು ಭಾರತದಲ್ಲಿನ ಟರ್ಕಿ ರಾಯಭಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!