ಸಾಮಾಗ್ರಿಗಳು
ಅಕ್ಕಿ
ತೊಗರಿಬೇಳೆ
ಉಪ್ಪು
ಅರಿಶಿಣ
ತರಕಾರಿಗಳು( ಕ್ಯಾರೆಟ್, ಬೀನ್ಸ್, ನವಿಲುಕೋಸು, ಕ್ಯಾಪ್ಸಿಕಂ, ಆಲೂಗಡ್ಡೆ, ಬಟಾಣಿ)
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಕರಿಬೇವು
ಕೊತ್ತಂಬರಿ
ಈರುಳ್ಳಿ
ಟೊಮ್ಯಾಟೊ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಬೇಳೆ, ಅಕ್ಕಿ, ತರಕಾರಿಗಳು, ಈರುಳ್ಳಿ, ಟೊಮ್ಯಾಟೊ, ಹಿಂಗ್, ಅರಿಶಿಣ ಹಾಗೂ ಉಪ್ಪು ಹಾಕಿ, ಇದಕ್ಕೆ ನೀರು ಹಾಕಿ ಮೂರು ವಿಶಲ್ ಕೂಗಿಸಿ
ನಂತರ ಇದಕ್ಕೆ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ, ಆಮೇಲೆ ಸಣ್ಣ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಶೇಂಗಾ ಹಾಕಿ ಮಿಕ್ಸ್ ಮಾಡಿ
ಇದನ್ನು ಬೇಳೆ ಅನ್ನದ ಜೊತೆ ಮಿಕ್ಸ್ ಮಾಡಿ ಕುದಿಸಿದ್ರೆ ಬಿಸಿಬೇಳೆಬಾತ್ ರೆಡಿ