ನಮಗೆ ಲೆಕ್ಕವಿಲ್ಲದಷ್ಟು ನೆನಪುಗಳನ್ನು ನೀಡಿದ್ದೀರಿ, ಥ್ಯಾಂಕ್ಸ್ ಗಬ್ಬರ್: ಧವನ್‌ ಗೆ ಭಾವನಾತ್ಮಕ ಸಂದೇಶ ನೀಡಿದ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದ ಟೀಮ್​ ಇಂಡಿಯಾದ ಎಡಗೈ ಆರಂಭಿಕ ಬ್ಯಾಟರ್​ ಶಿಖರ್​ ಧವನ್​ಗೆ ಸಹ ಆಟಗಾರ ವಿರಾಟ್​ ಕೊಹ್ಲಿ ಭಾವನಾತ್ಮಕ ಸಂದೇಶದ ಮೂಲಕ ನಿವೃತ್ತ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಶಿಖರ್​ ಧವನ್​ ಕುರಿತು ಬರೆದುಕೊಂಡಿರುವ ಕೊಹ್ಲಿ, ‘ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಭಯಮುಕ್ತ ಪ್ರದರ್ಶನ ನೀಡಿದ್ದೀರಿ. ಇದೇ ಕಾರಣಕ್ಕೆ ಭಾರತದ ಅತ್ಯಂತ ವಿಶ್ವಾಸಾರ್ಹ ಓಪನರ್‌ಗಳಲ್ಲಿ ಒಬ್ಬರಾಗಲು ಸಾಧ್ಯವಾಯಿತು. ನೀವು ನಮಗೆ ಪಾಲಿಸಲು ಲೆಕ್ಕವಿಲ್ಲದಷ್ಟು ನೆನಪುಗಳನ್ನು ನೀಡಿದ್ದೀರಿ. ಆಟದ ಮೇಲಿನ ನಿಮ್ಮ ಉತ್ಸಾಹ, ನಿಮ್ಮ ಕ್ರೀಡಾ ಮನೋಭಾವ ಮತ್ತು ನಿಮ್ಮ ಟ್ರೇಡ್‌ಮಾರ್ಕ್ ಸ್ಮೈಲ್ ತಪ್ಪಿಹೋಗುತ್ತದೆ. ಆದರೆ, ನಿಮ್ಮ ಪರಂಪರೆಯು ಜೀವಿಸುತ್ತದೆ. ನೆನಪುಗಳು, ಮರೆಯಲಾಗದ ಪ್ರದರ್ಶನಗಳು ಮತ್ತು ಯಾವಾಗಲೂ ನಿಮ್ಮ ಹೃದಯದಿಂದ ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು ಗಬ್ಬರ್. ಮೈದಾನದ ಹೊರಗೆ ನಿಮ್ಮ ಮುಂದಿನ ಇನ್ನಿಂಗ್ಸ್​ಗೆ ನಿಮಗೆ ಶುಭ ಹಾರೈಸುತ್ತೇನೆ” ಎಂದು ಕೊಹ್ಲಿ ಭಾವನಾತ್ಮವಾಗಿ ಬರೆದುಕೊಂಡಿದ್ದಾರೆ.

2013ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಮೊಹಾಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸುವ ಮೂಲಕ ಶಿಖರ್​ ಧವನ್​ ಭಾರತದ ಕ್ರಿಕೆಟ್​ಗೆ ಹೆಚ್ಚು ಪರಿಚಿತರಾದರು. ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರಿಂದ ಟೆಸ್ಟ್​ ಕ್ಯಾಪ್​ ಪಡೆದುಕೊಂಡಿದ್ದ ಧವನ್​, 174 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್​ ಸಹಿತ 187 ರನ್​ ಸಿಡಿಸಿದ್ದರು. 85 ಎಸೆತಗಳಲ್ಲೇ ಶತಕ ಪೂರೈಸುವ ಮೂಲಕ ಪದಾರ್ಪಣೆಯ ಟೆಸ್ಟ್​ನಲ್ಲಿ ಅತಿವೇಗದ ಶತಕ ಸಿಡಿಸಿದ ಸಾಧಕ ಎನಿಸಿದ್ದರು. ಅಲ್ಲದೆ ಪದಾರ್ಪಣೆಯ ಟೆಸ್ಟ್​ನಲ್ಲಿ ಭಾರತ ಪರ ಗರಿಷ್ಠ ರನ್​ ಸ್ಕೋರರ್​ ಎನಿಸಿದ್ದರು.

38 ವರ್ಷದ ಧವನ್​ ಶನಿವಾರ ಬೆಳಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!