June 29, 2026
Monday, June 29, 2026
spot_img

ಕಥೆ ಬರ್ದಿದ್ದೀರಿ ಆದರೆ ಅದನ್ನು ಸಿನಿಮಾ ಮಾಡೋದು ಹೇಗೆ ಗೊತ್ತಾಗ್ತಿಲ್ವಾ? ಹೊಸ ವೇದಿಕೆ ಕಲ್ಪಿಸಿದ ಪ್ರಿಯಾ ಸುದೀಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಸುದೀಪ್‌ ಪತ್ನಿ, ನಿರ್ಮಾಪಕಿ ಪ್ರಿಯಾ ಸುದೀಪ್‌ ಚಿತ್ರರಂಗದ ಹೊಸ ಪ್ರತಿಭೆಗಳು ಹಾಗೂ ಕತೆಗಾರರಿಗೆ ಸುವರ್ಣ ಅವಕಾಶವೊಂದನ್ನು ನೀಡಿದ್ದಾರೆ. ತಮ್ಮ ಅಧಿಕೃತ ಬ್ಯಾನರ್‌ ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೋ ಮೂಲಕ ಹೊಸ ಹಾಗೂ ವಿಭಿನ್ನ ಕಥೆಗಳನ್ನು ಆಹ್ವಾನಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

https://www.instagram.com/p/DaIMCbIiUU7/?utm_source=ig_embed&ig_rid=AbHYBuYIMuIIdowaBnjR6Bq

ಎಷ್ಟೋ ಕಥೆಗಳು ಕಥೆಗಾರರ ಹಾಳೆಗಳಲ್ಲಿಯೇ ಉಳಿದುಹೋಗುತ್ತವೆ. ಇದನ್ನು ಸಿನಿಮಾ ಮಾಡಿ ಜನರ ಮುಂದೆ ಇಡಬೇಕು ಎನ್ನುವ ಆಸೆ ಇರುತ್ತದೆ ಆದರೆ ಹೇಗೆ ಅನ್ನೋದು ಗೊತ್ತಿರೋದಿಲ್ಲ. ಒಳ್ಳೆ ಕಥೆ ಇಟ್ಟುಕೊಂಡ ನೂತನ ಬರಹಗಾರರಿಗೆ ಇದು ಉತ್ತಮ ಅವಕಾಶವಾಗಿದೆ.

ಪೋಸ್ಟ್‌ನಲ್ಲೇನಿದೆ?

ಕೇವಲ ಸಾಮಾನ್ಯ ಕಥೆಗಳಲ್ಲದೆ, ಮನಸ್ಸನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಹಾಗೂ ಬೆಳ್ಳಿಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳನ್ನು ಹುಡುಕಲಾಗುತ್ತಿದೆ. ಎಲ್ಲಾ ಮಾದರಿಯ ಕಥೆಗಳಿಗೆ ಮುಕ್ತ ಅವಕಾಶ: ನಿಮ್ಮ ಬಳಿ ಮೌಲಿಕ ಕಥೆ, ಚಿತ್ರಕಥೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ (ಕಾನ್ಸೆಪ್ಟ್) ಇದ್ದರೆ ಹಂಚಿಕೊಳ್ಳಬಹುದು. ಎಲ್ಲಾ ಪ್ರಕಾರದ ಮತ್ತು ಎಲ್ಲಾ ಮಾದರಿಯ ಕಥಾ ಸಲ್ಲಿಕೆಗಳನ್ನು ತಂಡವು ಸ್ವಾಗತಿಸುತ್ತದೆ. ನಿಮ್ಮ ಕಥೆ ಮುಂದಿನ ದೊಡ್ಡ ಪ್ರಯಾಣ ಆಗಬಹುದು. ನಮ್ಮನ್ನು ಸಂಪರ್ಕಿಸಿ 6363307434 ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !