ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸದ್ಯ ರಣಬಾಲಿ ಸಿನಿಮಾ ಪ್ರಮೋಷನ್ಸ್ನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿದ್ದು, ಆಂಕರ್ ಅನುಶ್ರೀ ಅವರ ಜೊತೆ ಸಂದರ್ಶನವೊಂದನ್ನು ನಡೆಸಿದ್ದಾರೆ.
ಅನುಶ್ರೀ ಜೊತೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ವಿಜಯ್ ನಮಸ್ತೆ, ಹೇಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನು ಕಂಡು ಅನುಶ್ರೀ ಖುಷಿಪಟ್ಟಿದ್ದು, ಚೆನ್ನಾಗಿಯೇ ಕನ್ನಡ ಕಲಿಸಿದ್ದೀರಿ ಎಂದು ರಶ್ಮಿಕಾಗೆ ಹೇಳಿದ್ದಾರೆ. ತದನಂತರ ವಿಜಯ್, ಅನುಶ್ರೀ ನೀವು ನೋಡೋಕೆ ತುಂಬಾ ಮುದ್ದಾಗಿದ್ದೀರಿ ಎಂದು ಹೇಳಿದ್ದಾರೆ. ನೀವು ಕೂರ್ಗ್ ಅಳಿಯ, ನಾನು ಕೂರ್ಗ್ ಸೊಸೆ. ನಮ್ಮಿಬ್ಬರ ನಡುವೆ ಕೂರ್ಗ್ ಕಾಮನ್ ಅಂಶವಾಗಿದೆ ಎಂದು ಅನುಶ್ರೀ ವಿಜಯ್ಗೆ ಹೇಳಿದ್ದಾರೆ.
https://www.instagram.com/reel/Dedf_D7zb2E/?obrf=Y3FlamJ5aWhrcmYx
ತಮ್ಮ ಇಂಟರ್ವ್ಯೂ ಪ್ರೋಮೋವನ್ನು ಅನುಶ್ರೀ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ರಣಬಾಲಿ ಸಿನಿಮಾ ಹೇಗಿದೆ? ಇದನ್ನು ಯಾರೆಲ್ಲಾ ನೋಡಬಹುದು ಎಂಬೆಲ್ಲಾ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ವಿಜಯ್ ಹಾಗೂ ರಶ್ಮಿಕಾ ಕಾಲೆಳೆದಿರುವ ವಿಡಿಯೋ ವೈರಲ್ ಆಗಿದೆ.
ಇಂಟರ್ವ್ಯೂ ಮಧ್ಯೆಯೇ ನಟಿ ರಶ್ಮಿಕಾ ಪ್ರೇಮದ ಊರಲಿ ಸಿನಿಮಾ ನಟಿ ತಪಸ್ವಿನಿ ಪೂಣಚ್ಚಗೆ ಕರೆ ಮಾಡಿ ಸಿನಿಮಾ ಇಷ್ಟು ಚೆನ್ನಾಗಿ ಮಾಡುತ್ತಿರುವುದು ತುಂಬಾ ಖುಷಿಯಿದೆ. ನಮ್ಮ ಕೂರ್ಗ್ನ ಹೆಣ್ಣುಮಕ್ಕಳು ಇಷ್ಟು ಎತ್ತರಕ್ಕೆ ಬೆಳೆಯುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.
ರಶ್ಮಿಕಾ ಇಷ್ಟು ಎತ್ತರಕ್ಕೆ ಬೆಳೆದರೂ ಸ್ಯಾಂಡಲ್ವುಡ್ನಲ್ಲಿ ಅವರ ಬಗೆಗಿನ ಹೇಟ್ ಕಡಿಮೆ ಆಗಿಲ್ಲ. ಕಮೆಂಟ್ಗಳಲ್ಲಿ ಜನ ಇವರ ಇಂಟರ್ವ್ಯೂ ಯಾಕೆ ಮಾಡಿದ್ರಿ? ಟಾಕ್ಸಿಕ್ ಬಂದಾಗ ಇರುಮುಡಿಗೆ ಸಪೋರ್ಟ್ ಮಾಡಿದ್ದರು. ಇವರ ಸಿನಿಮಾ ನಾವೇಕೆ ನೋಡಬೇಕು? ಕನ್ನಡ ಹಾಗೂ ಕನ್ನಡಿಗರನ್ನು ಅವಮಾನ ಮಾಡುವವರನ್ನು ಇಂಟರ್ವ್ಯೂ ಮಾಡಿದರೆ ನಿಮ್ಮನ್ನೂ ಬ್ಯಾನ್ ಮಾಡ್ತೀವಿ ಎಂದು ಅನುಶ್ರೀ ಅವರಿಗೆ ಜನ ಹೇಳಿದ್ದಾರೆ. ಕೆಲವರು ಮಾತ್ರ ರಶ್ಮಿಕಾ ಯಾವ ಊರಿನ ಸೊಸೆ ಆದರೇನು ಅವರು ನಮ್ಮ ಕನ್ನಡದ ಮನೆಮಗಳು, ಗಂಡನಿಗೆ ಕನ್ನಡ ಕಲಿಸಿ ಮಾತನಾಡಿಸಿಲ್ವಾ? ರಕ್ಷಿತ್ ಶೆಟ್ಟಿ ಜೊತೆಗಿನ ಗತಕಾಲದ ಬ್ರೇಕಪ್ ವಿಷಯವನ್ನು ಇಟ್ಟುಕೊಂಡು ನಟನೆಯನ್ನು ದ್ವೇಷಿಸುವುದು ತಪ್ಪು. ಉತ್ತಮ ಕಥೆ ಸಿಕ್ಕರೆ ಕನ್ನಡದಲ್ಲಿಯೂ ನಟನೆ ಮಾಡಲು ರಶ್ಮಿಕಾ ತಯಾರಿದ್ದಾರೆ ಎಂದು ಪರ ವಹಿಸಿಕೊಂಡಿದ್ದಾರೆ.



