ಆಚಾರ್ಯ ಹರಿಹರರ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀವು ಓದಲೇಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್: (ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಹೋರಾಟಗಾರರಲ್ಲಿ ಒಬ್ಬರಾದ ಹರಿಹರ ಅವರು 1879 ರಲ್ಲಿ ಪುರಿ ಜಿಲ್ಲೆಯ ಶ್ರೀರಾಮಚಂದ್ರಾಪುರ ಗ್ರಾಮದಲ್ಲಿ ಸಖಿಗೋಪಾಲ್ ಎಂಬಲ್ಲಿ ಮಹಾದೇಬ್ ಬ್ರಹ್ಮ ಮತ್ತು ಶ್ರಧಾದೇವಿ ದಂಪತಿಗಳಿಗೆ ಜನಿಸಿದರು. ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಅವರು ಪುರಿ ಜಿಲ್ಲಾ ಶಾಲೆಯಲ್ಲಿ ಓದಿದರು. ಬಾಲ್ಯದಿಂದಲೂ ಆಚಾರ್ಯ ಹರಿಹರರು ತಮ್ಮ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು.

1930 ರಲ್ಲಿ, ಅವರು ಗೋಪಬಂಧು ಚೌಧರಿ ಅವರೊಂದಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು ಮತ್ತು ಉಪ್ಪಿನ ಕಾನೂನನ್ನು ಮುರಿಯಲು ಕಟಕ್‌ನಿಂದ ಬಾಲಸೋರ್‌ನ ಇಂಚುಡಿವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು. ಗೋಪಬಂಧು ಅವರನ್ನು ಕಾಕತಿಯಾ ಗ್ರಾಮದಲ್ಲಿ ಬಂಧಿಸಲಾಯಿತು, ನಂತರ ಆಚಾರ್ಯ ಹರಿಹರ ಅವರು ಮೆರವಣಿಗೆಯನ್ನು ಇಂಚುಡಿಗೆ ಮುನ್ನಡೆಸಿದರು. ಅವರನ್ನು ಎಲ್ಲಾ ಸತ್ಯಾಗ್ರಹಿಗಳೊಂದಿಗೆ ಬಂಧಿಸಲಾಯಿತು. ಹೀಗೇ ಬಂಧಿತರಾದ ಅವರು ಬಿಹಾರದ ಹಜಾರಿಬಾಗ್ ಜೈಲಿನಲ್ಲಿ ಆರು ತಿಂಗಳುಗಳನ್ನು ಕಳೆದರು. ನಂತರ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಪ್ರತಿರೋಧಕ್ಕಾಗಿ ಹಲವಾರು ಬಾರಿ ಜೈಲು ಪಾಲಾದರು. 1942 ರಲ್ಲಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಸಿದ್ದಕ್ಕಾಗಿ ಅವರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಬರ್ಹಾಂಪುರ ಜೈಲಿಗೆ ಅಟ್ಟಲಾಯಿತು.

ಭಾರತದ ಸ್ವಾತಂತ್ರ್ಯದ ನಂತರ, ಅವರು ಒರಿಸ್ಸಾದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು. ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜದ, ದೇಶದ ಜನರಿಗೋಸ್ಕರ ಮುಡಿಪಾಗಿಟ್ಟಿದ್ದ ಅವರು 29 ಫೆಬ್ರವರಿ 1971 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!