Saturday, August 20, 2022

Latest Posts

ಮುಂಡಿತ್ತಡ್ಕದ ದೀಪ್ನಾಜೆಗೆ ಕರ್ನಾಟಕ ಪಿಯುಸಿಯಲ್ಲಿ 4ನೇ ರ್‍ಯಾಂಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2021-22ನೇ ಶೈಕ್ಷಣಿಕ ವರ್ಷದ ಕರ್ನಾಟಕ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ನೀರ್ಚಾಲು ಸಮೀಪದ ಮುಂಡಿತ್ತಡ್ಕದ ದೀಪ್ನಾಜೆ 593 ಅಂಕಗಳನ್ನು ಪಡೆದು ಕರ್ನಾಟಕ ರಾಜ್ಯದಲ್ಲಿ ನಾಲ್ಕನೇ ರ್‍ಯಾಂಕ್ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈಕೆ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ಅರ್ಥಶಾಸ್ತ್ರದಲ್ಲಿ 100, ವ್ಯವಹಾರ ಅಧ್ಯಯನದಲ್ಲಿ 99, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100, ಇಂಗ್ಲೀಷ್ 95 ಮತ್ತು ಸಂಸ್ಕೃತದಲ್ಲಿ 99 ಅಂಕ ಗಳಿಸಿರುತ್ತಾರೆ.

ಮುಂಡಿತ್ತಡ್ಕ ನಿವಾಸಿ ಸಾಮಾಜಿಕ ಕಾರ್ಯಕರ್ತ ಎಸ್.ನಾರಾಯಣ ಹಾಗೂ ಪುಷ್ಪ ಕೆ. ದಂಪತಿಗಳ ಪುತ್ರಿ. ಎಜೆಬಿಎಸ್ ಪುತ್ತಿಗೆ ಶಾಲೆ ಹಾಗೂ ಬೇಳ ಸೈಂಟ್ ಬಾರ್ತಲೋಮಿಯಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದ ದೀಪ್ನಾಜೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಪೂರೈಸಿದ್ದಳು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!