May 19, 2026
Tuesday, May 19, 2026
spot_img

ಮಸೂದೆ ವಿರೋಧಿಸಿ ಮಾಡಿದ ಪಾಪಕ್ಕೆ ಶಿಕ್ಷೆ ಅನುಭವಿಸುತ್ತೀರಿ: ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರಿಗೆ ಹಕ್ಕು ನೀಡುವ ಉದ್ದೇಶದಿಂದ ಜಾರಿಗೆ ತರಲು ಹೊರಟಿರುವ ಮಸೂದೆಯನ್ನು ಸೋಲಿಸಿ ವಿಪಕ್ಷಗಳು ಭ್ರೂಣ ಹತ್ಯೆಯ ಪಾಪ ಹೊತ್ತುಕೊಂಡಿವೆ ಎಂದು ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬೆಂಬಲ ನೀಡದ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದರು.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಮಸೂದೆಗೆ ವಿರೋಧ ವ್ಯಕ್ತ ಪಡಿಸಿ ವಿಪಕ್ಷಗಳು ಪಾಪದ ಕೆಲಸ ಮಾಡಿವೆ. ಈ ಮೂಲಕ ಇಡೀ ದೇಶಕ್ಕೆ ಕಾಂಗ್ರೆಸ್‌ ಯಾವತ್ತೂ ಹೆಣ್ಮಕ್ಕಳ ಏಳಿಗೆ ಸಹಿಸಲ್ಲ ಎನ್ನುವುದು ಸಾಬೀತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಈ ಮಸೂದೆಯಿಂದ ಎಲ್ಲಾ ರಾಜ್ಯಗಳಿಗೆ ಸಮಾನ ಸ್ಥಾನ ಸಿಗುವ ಅವಕಾಶವಿತ್ತು. ಡಿಎಂಕೆಗೆ ಹೆಚ್ಚು ತಮಿಳು ಸಂಸದರನ್ನು ಲೋಕಸಭೆಗೆ ಕಳಿಸುವ ಅವಕಾಶವಿತ್ತು. ಆದರೆ ಎಲ್ಲವನ್ನೂ ತಮ್ಮ ಕೈಯಾರೆ ಹಾಳು ಮಾಡಿಕೊಂಡಿದೆ. ಕಾಂಗ್ರೆಸ್‌ ಈ ಹಿಂದೆಯೂ 370 ವಿಧಿ ರದ್ದು ಮಾಡುವಾಗಲೂ, ತ್ರಿವಳಿ ತಲಾಖ್‌ ಕಾನೂನು ಜಾರಿ ಮಾಡುವಾಗಲೂ ವಿರೋಧ ವ್ಯಕ್ತಪಡಿಸಿತ್ತು. ಪ್ರಸುತ್ತ ಒಂದು ದೇಶ-ಒಂದು ಚುನಾವಣೆ, ಎಸ್‌ಐಆರ್‌ ಅನ್ನೂ ವಿರೋಧಿಸುತ್ತಿದೆ. ಈ ಮೂಲಕ ದೇಶದ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಹೊರಟರು ಅಡ್ಡಿಪಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನಮಗೆ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ. ದೇಶದ‌ ಶೇಕಡಾ ನೂರರಷ್ಟು ಮಹಿಳೆಯರ ಆಶೀರ್ವಾದ ನಮ್ಮ ಮೇಲಿದೆ. ನಾವು ಮಹಿಳಾ ಮೀಸಲಾತಿ ಮಸೂದೆಯನ್ನು ಇಲ್ಲಿಗೇ ಬಿಡುವುದಿಲ್ಲ. ಇದಕ್ಕಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಮತ್ತೆ ಮಹಿಳಾ ಮೀಸಲಾತಿ ಮಸೂದೆಗೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.

ಇಂದು ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ 66 ಪ್ರತಿಶತ ಮತಗಳನ್ನು ನಾವು ಬಳಿ ಇಲ್ಲ. ಆದರೆ ಮಹಿಳಾ ಶಕ್ತಿಯ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದ ನಮ್ಮೊಂದಿಗೆ ಇದೆ. ಹೀಗಾಗಿ ನಾವು ಸೋತಿದ್ದೇವೆ ಎಂದಲ್ಲ ಎಂದು ಖಡಕ್ ಸಂದೇಶ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !