Friday, February 3, 2023

Latest Posts

ಕುಂಭ ರಾಶಿಯವರಷ್ಟು ಬುದ್ಧಿವಂತರು ಇನ್ನೆಲ್ಲೂ ಸಿಗೋದಿಲ್ಲ, ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

ಪ್ರತಿ ರಾಶಿಯವರಿಗೂ ಅವರದ್ದೇ ಆದ ಗುಣಗಳಿವೆ. ವಿಶಿಷ್ಟವಾದ ಗುಣಗಳು ಇರುವ ಕಾರಣ ಇವರು ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಕುಂಭ ರಾಶಿಯವರ ಗುಣಗಳು ಹೀಗಿವೆ..

 • ಇವರನ್ನು ಹ್ಯಾಂಡಲ್ ಮಾಡೋದು ತುಂಬಾ ಕಷ್ಟ. ಸುಲಭವಾಗಿ ಇವರನ್ನು ನೋಡಿಕೊಳ್ಳೋಕೆ ಆಗೋದಿಲ್ಲ.
 • ಇವರು ಭಾವನೆಗಳು ಎಂದು ಬಂದರೆ ಅತಿಯಾದ ಭಾವನಾತ್ಮಕ ಜೀವಿ, ಇಲ್ಲವೆಂದರೆ ಭಾವನೆಗಳೇ ಇಲ್ಲದಂತೆ ಜೀವಿಸುತ್ತಾರೆ. ಎರಡರ ಮಧ್ಯೆ ಇರೋದು ಇವರಿಗೆ ಕಷ್ಟ.
 • ಇವರಷ್ಟು ರಿಯಲ್ ಆದ ವ್ಯಕ್ತಿಗಳು ಇನ್ನೆಲ್ಲೂ ಸಿಗೋದಿಲ್ಲ. ಸುಳ್ಳಾಡೋದು ಇವರಿಗೆ ಕಷ್ಟ.
 • ಎಲ್ಲಾ ಕರ್ತವ್ಯಗಳನ್ನು ಒಂದೇ ಸಮಯಕ್ಕೆ ನಿಭಾಯಿಸಬಲ್ಲ ಚಾಕಚಕ್ಯತೆ ಇವರಿಗಿದೆ.
 • ಹೆಚ್ಚು ಮಾತನಾಡೋದಿಲ್ಲ, ಯಾವಾಗಲೂ ಸ್ವತಂತ್ರರಾಗಿರೋಕೆ ಇಚ್ಛಿಸುತ್ತಾರೆ.
 • ಅತಿಯಾಗಿ ಆಲೋಚಿಸುತ್ತಾರೆ, ದೂರದ ಯೋಚನೆಗಳಲ್ಲೇ ಮುಳುಗುತ್ತಾರೆ.
 • ಯಾರು ಫೇಕ್, ಯಾರು ರಿಯಲ್ ಎನ್ನೋದನ್ನು ಇವರು ಸುಲಭವಾಗಿ ಕಂಡುಹಿಡಿಯುತ್ತಾರೆ
 • ಇವರಿಗೆ ಸ್ನೇಹಿತರು ಕಮ್ಮಿ, ಇರುವವರೆಲ್ಲಾ ಪ್ರೀತಿಪಾತ್ರರೇ.
 • ನಿಜವಾದ ಭಾವನೆಗಳನ್ನು ಅಡಗಿಸಿ ಇಡುತ್ತಾರೆ. ಹೆಣ್ಣುಮಕ್ಕಳ ಜೊತೆ ಮಾತು ಕಮ್ಮಿ.
 • ಉತ್ತಮ ಚಾಲಕರು ಇವರು, ಗಾಡಿ ಓಡಿಸುವುದರಲ್ಲಿ ನಿಸ್ಸೀಮರು.
 • ಲೆಕ್ಕ ಇವರ ಬೆಸ್ಟ್ ಫ್ರೆಂಡ್, ಲೆಕ್ಕಕ್ಕೆ ಸಂಬಂಧಿಸಿದ ಜೀವನ ಸಮಸ್ಯೆ ಕೂಡ ಸುಲಭವಾಗಿ ಬಗೆಹರಿಸುತ್ತಾರೆ.
 • ಪ್ರೀತಿ ಮಾಡುವುದರಲ್ಲಿ ಎತ್ತಿದ ಕೈ. ಪ್ರೀತಿಸಿದವರನ್ನು ಚೆನ್ನಾಗಿ ನೋಡಿಕೊಳ್ತಾರೆ.
 • ತಂದೆತಾಯಿಗೆ ಪ್ರೀತಿ ಮಕ್ಕಳು ಇವರಾಗುತ್ತಾರೆ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವುದೇ ಇವರ ಗುಣ.
 • ಶೋಕಿ ಜೀವನ ಇಷ್ಟಪಡುತ್ತಾರೆ. ದುಬಾರಿ ವಸ್ತುಗಳು ಇವರಿಗೆ ಇಷ್ಟ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!