Saturday, February 4, 2023

Latest Posts

ಬಾಲಯ್ಯ ಟಾಕ್ ಶೋಗೆ ಮ್ಯಾಚೋ ಸ್ಟಾರ್ ಸ್ಪೆಷಲ್ ಎಂಟ್ರಿ:ಹೈಪ್‌ ಕ್ರಿಯೇಟ್‌ ಎಪಿಸೋಡ್‌ಗೆ ಫ್ಯಾನ್ಸ್‌ ಕಾತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್‌ ಟಾಕ್‌ ಶೋ-2 ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಮ್ಯಾಚೋ ಸ್ಟಾರ್ ಗೋಪಿಚಂದ್ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಅಂತಿದ್ದಾಗೆ ಈ ಸಂಚಿಕೆಗೆ ಹೈಪ್ ಕ್ರಿಯೇಟ್ ಆಗಿದೆ.

ಆಯೋಜಕರು ಸಂಚಿಕೆಯ ಪ್ರೋಮೋ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬಾಲಯ್ಯ ಜೊತೆ ಪ್ರಭಾಸ್ ಮಾತುಕತೆ ಹರಟೆ ತೋರಿಸಲಾಗಿತ್ತು. ಇದರಲ್ಲಿ ಮ್ಯಾಚೋ ಸ್ಟಾರ್ ಗೋಪಿಚಂದ್ ಅವರ ಎಂಟ್ರಿಯನ್ನು ತೋರಿಸಲಾಗಿದೆ. ಬಾಲಯ್ಯ, ಗೋಪಿಚಂದ್‌, ಪ್ರಭಾಸ್‌ ಕಾಂಬಿನೇಷನ್‌ ಸಂಚಿಕೆಗೆ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.

ಈ ಪ್ರೋಮೋದಲ್ಲಿ ಗೋಪಿಚಂದ್‌ ಪ್ರಭಾಸ್‌ ಕುರಿತು ಏನೋ ಹೇಳಲು ಹೊರಟಿದ್ದಾರೆ. ಈ ಶೋನಲ್ಲಿ ಪ್ರಭಾಸ್‌ ಕುರಿತು ಇನ್ನಷ್ಟು ಆಸಕ್ತಿಕರ ವಿಚಾರಗಳು ಗೊತ್ತಾಗಲಿವೆ. ಸದ್ಯ, ಇದರ ಇತ್ತೀಚಿನ ಪ್ರೋಮೋ ಗ್ಲಿಂಪ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಂಚಿಕೆ ಯಾವಾಗ ಸ್ಟ್ರೀಮ್ ಆಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!