June 2, 2026
Tuesday, June 2, 2026
spot_img

ಪೊಲೀಸ್‌ ಹಿಡಿದಿದ್ದಾರೆಂದು ಮಹಿಳೆಗೆ 23 ಲಕ್ಷ ವಂಚಿಸಿದ ಯುವಕ! ಪ್ರೀತಿ-ನಂಬಿಕೆಯಿಂದಲೇ ಮೋಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಲಕ್ಷ ಲಕ್ಷ ರೂಪಾಯಿ ಮೋಸ ಮಾಡಿ ಪರಾರಿಯಾಗಿದ್ದಾನೆ!

ಹೌದು, ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನೊಬ್ಬ ಮಹಿಳೆಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ನಲ್ಲಿ ಪರಿಚಯವಾಗಿದ್ದ ಸ್ಕಾಟ್ಲೆಂಡ್‌ನಲ್ಲಿದ್ದ ವೈದ್ಯ ವಿಹಾನ್‌ ಮಿಶ್ರಾ ಆರೋಪಿ.

ವಿಹಾನ್‌ ಸ್ಕಾಟ್ಲೆಂಡ್‌ನಲ್ಲಿ ಡಾಕ್ಟರ್‌ ಆಗಿದ್ದೇನೆ ಎಂದು ಹೇಳಿಕೊಂಡಿದ್ದ. ಕುಟುಂಬದ ಬಗ್ಗೆ ಎಲ್ಲಾ ಡೀಟೇಲ್ಸ್‌ ತೆಗೆದುಕೊಂಡಿದ್ದ. ತಾನು ಭಾರತಕ್ಕೆ ಬಂದು ಭೇಟಿಯಾಗುತ್ತೇನೆ.ಇಬ್ಬರೂ ಮದುವೆಯಾಗೋಣ ಎಂದು ಸಂತ್ರಸ್ತೆಯನ್ನು ನಂಬಿಸಿದ್ದ. ದೆಹಲಿಗೆ ಬಂದ ನಂತರ ಬ್ರಿಟಿಷ್‌ ಪ್ರಜೆ ಆಗಿರುವ ಕಾರಣ ಪೊಲೀಸರು ಬಂಧಿಸಿದ್ದಾರೆ ಎಂದು ಮಹಿಳೆಯೊಬ್ಬರು ಸಂತ್ರಸ್ತೆಗೆ ಕರೆ ಮಾಡಿದ್ದಾರೆ.

ಬ್ರಿಟಿಷ್‌ ಕರೆನ್ಸಿಯನ್ನು ಭಾರತದ ರೂಪಾಯಿಗೆ ಕನ್ವರ್ಟ್‌ ಮಾಡಬೇಕು. ಇದಕ್ಕಾಗಿ ನೋಂದಣಿ, ಕ್ಲಿಯರೆನ್ಸ್‌ ಹಾಗೂ ಇನ್ನಿತರ ಶುಲ್ಕ ಬೇಕಿದೆ. ಹಣವನ್ನು ವರ್ಗಾಯಿಸಿ ಎಂದು ಮಹಿಳೆಗೆ ಅಧಿಕಾರಿಯ ಸೋಗಿನಲ್ಲಿದ್ದ ಮಹಿಳೆ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಸಂತ್ರಸ್ತೆ ಮದುವೆಯಾಗುವ ಹುಡುಗನಿಗಾಗಿ 23.5 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿದ್ದಾರೆ. ಹಣ ಹಾಕಿದ ಕೆಲವೇ ಗಂಟೆಗಳಲ್ಲಿ ವಿಹಾನ್‌ ಮಿಶ್ರಾ ನಾಪತ್ತೆಯಾಗಿದ್ದಾರೆ. ಅವರ ಫೋನ್‌ ನಂಬರ್‌ ಆಫ್‌ ಆಗಿದೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !