ಹೊಸ ದಿಗಂತ ವರದಿ, ಮುಂಡಗೋಡ:
ಬೈಕನಲ್ಲಿದ್ದ ಮೂವರು ಯುವಕರ ಗುಂಪೊಂದು ಮಹಿಳೆಯೊಬ್ಬರನ್ನು ಚುಡಾಯಿಸಿ ಕೈಲಿಂದ ಬ್ಯಾಂಗ್ ನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುವ ವೇಳೆ ಸ್ಥಳೀಯರ ಕೈಯಲ್ಲಿ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ನಡೆದಿದೆ.
ಮಹಿಳೆಯೊಬ್ಬರು ತಮ್ಮ ಸ್ಕೂಟಿಯ ಮೇಲೆ ಯಲ್ಲಾಪುರ ರಸ್ತೆಯ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ ಮೂರು ಯುವಕರ ಗುಂಪು ಮಹಿಳೆಯ ಮೈಮೇಲೆ ಹೋಗಿ ಚುಡಾಯಿಸಿ, ಮಹಿಳೆಯ ಕೈಲಿದ್ದ ಬ್ಯಾಂಗನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ರಸ್ತೆಯ ಮೇಲೆ ಹೋಗುತ್ತಿದ್ದ ಸಾರ್ವಜನಿಕರು ಇದನ್ನು ನೋಡಿ ಆ ಮೂರು ಯುವಕರಿಗೆ ಧರ್ಮದೇಟು ನೀಡಿ ತಕ್ಷಣವೇ 112 ಪೊಲೀಸರ ಸಹಾಯ ವೇಳೆಗೆ ಪೋನ್ ಮಾಡಿ ಮಾಹಿತಿ ನೀಡಿದ್ದಾರೆ.
ಆದರೆ ಪೊಲೀಸರು ಬರುವಷ್ಟರಲ್ಲಿ ಈ ಪುಂಡರು ತಮ್ಮ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕರಣ ದಾಕಲಿಸಿಕೊಳ್ಳುವರೊ ಅಥವಾ ಬುದ್ದಿ ಹೇಳಿ ಆರೋಪಿತರಿಗೆ ಕೈ ಬೀಡುವವರೆ ಕಾದು ನೋಡಬೇಕಾಗಿದೆ.