July 21, 2026
Tuesday, July 21, 2026
spot_img

ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಲಿಪ್ಸ್‌ಟಿಕ್‌ ಹಚ್ಚಿ ಬಳೆ ತೊಡಿಸಿದ ಯುವತಿ! ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳವಾಗಿದ್ದು, ಕಿರುಕುಳ ಕೊಟ್ಟವನಿಗೆ ತಕ್ಕ ಶಿಕ್ಷೆ ನೀಡಿದ್ದಾಳೆ. ಹುಡುಗನಿಗೆ ಬಳೆ ತೊಡಿಸಿ, ಮೇಕಪ್‌ ಮಾಡಿ, ಬೊಟ್ಟು ಇಟ್ಟು ಮುಖ ಕಾಣುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.

ಬದ್ನೇರಾ ಮತ್ತು ಅಕೋಲಾ ನಡುವಿನ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ​ಕಿರುಕುಳ ನೀಡಿದ ವ್ಯಕ್ತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕ‌ರು ಯುವತಿಯ ನೆರವಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಆಕೆ ಮೌನವಾಗಿರದೆ ಶಿಕ್ಷೆಯ ರೂಪವಾಗಿ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ, ಕೈ ಬಳೆ ತೊಡಿಸಿ ಆತನ ಮುಖ ಸ್ಪಷ್ಟವಾಗಿ ಕಾಣಿಸುವಂತೆ ವಿಡಿಯೊ ಮಾಡಿದ್ದಾಳೆ.

ಮಹಿಳೆಯರ ತಂಟೆಗೆ ಬಂದರೆ ಸಮಾಜದಲ್ಲಿ ತಲೆ ಎತ್ತಿ ಓಡಾಡದಂತೆ ಮಾಡಬಹುದು ಎಂಬುದನ್ನು ಯುವತಿ ತೋರಿಸಿದ್ದಾಳೆ. ತನಗಾದ ಅನ್ಯಾಯಕ್ಕೆ ಈ ರೀತಿ ಶಿಕ್ಷೆ ನೀಡುವ ಮೂಲಕ ಪ್ರತಿಭಟನೆ ನಡೆಸಿದ್ದಾಳೆ. ಅನೇಕರು ಯುವತಿಯ ಧೈರ್ಯ ಮತ್ತು ಸಹ ಪ್ರಯಾಣಿಕರು ತೋರಿಸಿದ ಒಗ್ಗಟ್ಟನ್ನು ಶ್ಲಾಘಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಆ ಮಹಿಳೆ ಅವನ ಮುಖಕ್ಕೆ ಲಿಪ್‌ಸ್ಟಿಕ್‌ ಹಚ್ಚುತ್ತಿರುವುದು ಮತ್ತು ಮಣಿಕಟ್ಟಿನ ಮೇಲೆ ಬಳೆಗಳನ್ನು ತೊಡಿಸುತ್ತಿರುವುದನ್ನು ಕಾಣಬಹುದು. ಜನರಿಂದ ಹೊಡೆದ ತಿಂದ ಕಾಮುಕ ಏನೂ ಮಾಡಲಾರದೇ ಸುಮ್ಮನೆ ಮೇಕಪ್‌ ಮಾಡಿಸಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದು, ಪ್ರತೀ ಮಹಿಳೆಯೂ ಇಷ್ಟೇ ಧೈರ್ಯವಂತೆಯಾಗಬೇಕು ಹಾಗೂ ಸುತ್ತಮುತ್ತಲಿನ ಜನ ಇದೇ ರೀತಿ ಸಾಥ್‌ ನೀಡಬೇಕು ಎನ್ನುವ ಕಮೆಂಟ್ಸ್‌ ಬಂದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !