ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆಗೆ ಮುಂದಾದ ಯುವತಿ: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವಣ ಸೆಲ್ಫಿ ವಿವಾದವು ಬೇರೆ ರೂಪ ಪಡೆದಿದ್ದು, ಸೆಲ್ಫಿ ನಿರಾಕರಿಸಿದ ಕಾರಣಕ್ಕೆ ಪೃಥ್ವಿ ಶಾ ಸಂಚರಿಸುತ್ತಿದ್ದ ಕಾರು ಚೇಸ್ ಮಾಡಿ ಬಂದ ಅಭಿಮಾನಿಗಳು ಬೇಸ್ ಬಾಲ್ ಬ್ಯಾಟ್ ಮೂಲಕ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ದೂರು ದಾಖಲಿಸಿದ್ದರು. ಅದರಂತೆ 8 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಪೃಥ್ವಿ ಶಾ ವಿರುದ್ಧ ಹಲ್ಲೆಗೆ ಮುಂದಾಗಿರುವ ಯುವತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೃಥ್ವಿ ಶಾ ಗೆಳೆಯ ನೀಡಿದ ದೂರಿನಲ್ಲಿ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ ಎಂದರೆ, ಇತ್ತ ಪೃಥ್ವಿ ಶಾ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಭಿಮಾನಿಗಳು ದೂರಿದ್ದಾರೆ.

ಪ್ರಸ್ತುತ ಮಾಹಿತಿ ಪ್ರಕಾರ, ಪೃಥ್ವಿ ಶಾ ಅವರೊಂದಿಗೆ ಕೆಲ ಅಭಿಮಾನಿಗಳು ಸೆಲ್ಫಿಗೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರಿಗೆ ಸೆಲ್ಫಿ ನೀಡಿದ್ದಾರೆ. ಇದರ ನಂತರ ಇನ್ನಷ್ಟು ಮಂದಿ ಸೆಲ್ಫಿ ಕ್ಲಿಕ್ಕಿಸಲು ಕೇಳಿಕೊಂಡಿದ್ದಾರೆ.ಈ ವೇಳೆ ಪೃಥ್ವಿ ಶಾ ನಿರಾಕರಿಸಿದ್ದರು. ಇದಾದ ಬಳಿಕ ಬೇಸ್​ಬಾಲ್ ಬ್ಯಾಟ್ ಮೂಲಕ ಕಿಡಿಗೇಡಿಗಳ ಗುಂಪೊಂದು ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾಗಿದೆ. ವಿಡಿಯೋದಲ್ಲೂ ಪೃಥ್ವಿ ಶಾ ಯುವತಿಯ ಕೈಯಿಂದ ಬೇಸ್​ಬಾಲ್ ಬ್ಯಾಟ್​​ ಕಸಿದುಕೊಳ್ಳಲು ಯತ್ನಿಸುತ್ತಿರುವುದು ಕಾಣಬಹುದು. ಈ ವಿಡಿಯೋದಲ್ಲಿರುವ ಯುವತಿಯನ್ನು ಸಪ್ನಾ ಗಿಲ್ ಎಂದು ಗುರುತಿಸಲಾಗಿದೆ.

ಆದ್ರೆ ಯುವತಿಯು ಪೃಥ್ವಿ ಶಾ ತನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಸಪ್ನಾ ಗಿಲ್ ಅವರ ವಕೀಲ ಅಲಿ ಕಾಸಿಫ್ ಖಾನ್ ದೇಶಮುಖ್ ಪ್ರಕಾರ, ಪೊಲೀಸರು ನನ್ನ ಕಕ್ಷಿದಾರರಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!